ಬೈಂದೂರು: ಮ್ಯೂಸಿಕಲ್ ಪಬ್ಲಿಸಿಟಿ ಬೈಂದೂರು ಇದರ ವತಿಯಿಂದ ಬೈಂದೂರು ಜಾತ್ರೆಯ ಪ್ರಯುಕ್ತ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಿತು.

ಆಧ್ಯಾತ್ಮಿಕ ಚಿಂತಕರಾದ ವೇದನಾಥ್ ಗುರೂಜಿ ನಾಗೂರು ಸಾಂಸ್ಕ್ರತಿಕ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ ಅವು ನಮ್ಮ ಸಂಸ್ಕೃತಿ ಮತ್ತು ಬಾಂಧವ್ಯವನ್ನು ಬೆಸೆಯುವ ಕೊಂಡಿಗಳು.ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಭೆಗಳಿಗೆ ವೇದಿಕೆ ನೀಡುವುದರ ಜೊತೆಗೆ ಜನರಲ್ಲಿ ಸಂತೋಷ  ಮತ್ತು ಐಕ್ಯತೆಯನ್ನು ಮೂಡಿಸುತ್ತವೆ ಹಾಗೂ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಂಸ್ಕ್ರತಿಕ ಸಂಭ್ರಮ ಬೈಂದೂರು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರಲಿ ಎಂದರು.

ಮುಖ್ಯ ಅತಿಥಿಗಳಾಗಿ ಕಾವೂರು ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ರಾಘವೇಂದ್ರ ಬೈಂದೂರು,ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಸಹಾಯಕ ಆಯುಕ್ತ ಸತೀಶ್ ಬಟವಾಡಿ, ಶ್ರೇಯಾ ಮರವಂತೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದ್ಯಮಿ ಜಯಾನಂದ ಹೋಬಳಿದಾರ್,ದಿನಕರ ಪಟ್ವಾಲ್ ಹಾಗೂ ಶಿಖಾ ಬಿಜೂರು ರವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ಮಾಣಿಕ್ಯ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಂಸ್ಥೆಯ ಮುಖ್ಯಸ್ಥ ಸುಶಾಂತ್ ಬೈಂದೂರು  ಸ್ವಾಗತಿಸಿದರು.ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.ಕಿರಣ್ ಬಿಜೂರು ವಂದಿಸಿದರು.

Leave a Reply

Your email address will not be published. Required fields are marked *

sixteen + 19 =