ಬೈಂದೂರು: ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಸಾಧಕರಿದ್ದಾರೆ.ಸಾಧಿಸುವ ಸಮಯದಲ್ಲಿ ಉತ್ತಮ ಪ್ರೋತ್ಸಾಹ ದೊರೆತಾಗ ಇನ್ನಷ್ಟು ಸಾಧನೆ ಸಾಧ್ಯ.ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಸಂಘಟನೆ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಹಾಗೂ ಗೌರವ ಉಳಿಸಿಕೊಂಡಿರುವುದು ಸಂಘದ ಸಮಾಜಮುಖಿ ಸಾಧನೆಯ ಹಿರಿಮೆಯಾಗಿದೆ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ ಹೇಳಿದರು ಅವರು ಬಂಟರಯಾನೆ ನಾಡವರ ಸಭಾಭವನ ಯಡ್ತರೆಯಲ್ಲಿ ನಡೆದ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕ,ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಉಡುಪಿ ಹಾಗೂ ಹೆಲ್ತ್ ಕೇರ್ ಮಂಗಳೂರು ಇದರ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ ಹಾಗೂ ಮೀನುಗಾರರ ಸೌಲಭ್ಯದ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಜಿ. ಕಸ್ಟಮ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರತಿಭಾ ಪುರಸ್ಕಾರದ ದಾನಿಗಳಾದ ಕೃಷ್ಣ ಮೊಗವೀರ ಬಿಂದುಮನೆ ಇವರ ಸಹೋದರ ರಾಘವ ಬಿಂದುಮನೆ, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಮೊಗವೀರ ಯುವ ಸಂಘಟನೆ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ಸುವರ್ಣ,ಮೊಗವೀರ ಸಮಾಜದ ಗೌರವ ಸಲಹೆಗಾರ ರಾಮ ಮೊಗವೀರ ಕಳವಾಡಿ, ಮಾಜಿ ಜಿ.ಪಂ ಸದಸ್ಯ ಮದನ್ ಕುಮಾರ್ ಉಪ್ಪುಂದ,ಬೈಂದೂರು ಸಿಟಿ ಜೆಸಿಐ ಮಾಜಿ ಅಧ್ಯಕ್ಷೆ ಅನಿತಾ ಆರ್.ಕೆ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸುಧಾ ಕೆ.ಮೊಗವೀರ,ಮಾಜಿ ಅಧ್ಯಕ್ಷ ಗಂಗಾಧರ ಮೊಗವೀರ,ಭಾರತೀಯ ಜೀವ ವಿಮಾ ನಿಗಮದ ಕುಂದಾಪುರ ಶಾಖಾ ಪ್ರಬಂಧಕ ರಾಮ ಗರ್ಜಿನಿತ್ಲು ಉಪಸ್ಥಿತರಿದ್ದರು.








ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರದ ದಾನಿಗಳನ್ನು, ಎಸ್.ಎಸ್.ಎಲ್.ಸಿ ವಿಭಾಗದಲ್ಲಿ 625ರಲ್ಲಿ 623 ಅಂಕ ಪಡೆದ ಮಾನ್ಯ ಎಮ್.ಮೊಗವೀರ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸಮ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಕೃಷ್ಣ ಮೊಗವೀರ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಪಾಂಡುರಂಗ ಮೊಗವೀರ ತಗ್ಗರ್ಸೆ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಚಂದ್ರಶೇಖರ ಮೊಗವೀರ ಸೂಕು೯ಂದ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು