ಬೈಂದೂರು: ಗಂಗನಾಡು ಶಾಲೆಯ ಕಟ್ಟಡಗಳು ಧರೆಗೆ ಉರುಳಿದಾಗ ಸರಕಾರದ ಅನುದಾನಗಳು ಇಲ್ಲದಿರುವಾಗ ಮಕ್ಕಳು ಶಿಕ್ಷಣದ ಬಗ್ಗೆ ಆತಂಕ ಎದುರಾಗಿತ್ತು.ಸಮಸ್ಯೆಯ ಪರಿಹಾರಕ್ಕೆ ನಾವು ಕಂಡುಕೊಂಡ ಮಾರ್ಗ ಕಂಪನಿಯ ಬಳಿ ಹೋಗಿ ಮನವಿ ಮಾಡಿ, ಸಮಸ್ಯೆಗಳ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟ ಪ್ರಯತ್ನದಿಂದಾಗಿ ಇಂದು ಕುಗ್ರಾಮದಲ್ಲಿ ಇರುವ ಶಾಲೆಗೆ ರೋಬೋ ಸಾಫ್ಟ್ ಕಂಪೆನಿ ರೂ. 35 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಾಕ್ಷಿಯಾಗಿದೆ ಎಂದು ಸಂಸ್ಥೆಯ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಸಮೃದ್ದ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿಯಲ್ಲಿ ರೋಬೋ ಸಾಪ್ಟ್ ಟೆಕ್ನಾಲಜೀಸ್ ಉಡುಪಿ ಇವರ ಸಿ.ಎಸ್.ಆರ್ ನಿಧಿಯಿಂದ ಗಂಗನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ತರಗತಿ ಕೋಣೆ,ಪೀಠೋಪಕರಣ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಜು ಬಿ.ಮರಾಠಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ಅನಿತಾ ಆರ್.ಕೆ,ರೋಬೋ ಸಾಪ್ಟ್ ಕಂಪೆನಿಯ ಲೆಕ್ಕ ಪರಿಶೋಧನಾ ವಿಭಾಗದ ಮುಖ್ಯಸ್ಥ ಕೃಷ್ಣ ರಾಜ್ ರಾವ್,ಇಂಜಿನಿಯರ್ ಗೋಪಾಲಕೃಷ್ಣ ಕಾಮತ್,ಚಕ್ರಿ ಹೆಗ್ಡೆ, ಶರತ್ ಆಚಾರ್ಯ, ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ, ಸಂಪನ್ಮೂಲ ವ್ಯಕ್ತಿ ಮಂಜುನಾಥ ನಾಯ್ಕ, ಸುಬ್ರಹ್ಮಣ್ಯ ಜೋಶಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ್ ಮರಾಠಿ, ಎಸ್. ಡಿ.ಎಮ್.ಸಿ ಮಾಜಿ ಅಧ್ಯಕ್ಷ ಗಣಪ ಜಿ.ಮರಾಠಿ,ಮುತ್ತಯ್ಯ ಮರಾಠಿ,ಸ್ಥಳದಾನಿಗಳಾದ ಸುಭಾಶ್ಚಚಂದ್ರ, ದೇವಪ್ಪ ಹಂದೆ, ಪವನ್ ನಾರಾಯಣ ಮರಾಠಿ,ಮುತ್ತಯ್ಯ ಮರಾಠಿ,ಪೋಷಕ ಪ್ರತಿನಿಧಿ ಚೆನ್ನಯ್ಯ ಪೂಜಾರಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಭಾಗೀರಥಿ,ರಾಜೇಶ್ವರಿ ಸಿ.ಮರಾಠಿ, ಸುಬ್ರಹ್ಮಣ್ಯ ಕೆ.ವಿ ಕೆನರಾ ಫೌಂಡೇಶನ್, ಶಾಲಾ ಎಸ್.ಡಿ.ಸಿ ಅಧ್ಯಕ್ಷ ರಾಜು ಡಿ. ಉಪಸ್ಥಿತರಿದ್ದರು.









ಈ ಸಂದರ್ಭದಲ್ಲಿ ಶಾಸಕರನ್ನು ಹಾಗೂ ರೋಬೋ ಸಾಪ್ಟ್ ಸಂಸ್ಥೆಯ ಮುಖ್ಯಸ್ಥರನ್ನು ಸಮ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಬಿಲ್ಲವ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕಿ ಶಾರದಾ ಕಾರ್ಯಕ್ರಮ ನಿರೂಪಿಸಿದರು.ಸಹಶಿಕ್ಷಕ ರಾಘವೇಂದ್ರ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು