ಬೈಂದೂರು: ಉದ್ಯಮಿ ಎನ್.ಐ.ಶೆಟ್ಟಿ ಹುಬ್ಬಳ್ಳಿ (ಕುದ್ರುಕೋಡು ಹೊಸ್ಮನೆ) ಹಾಗೂ ಕೆ.ಆನಂದ ಶೆಟ್ಟಿ ಹುಬ್ಬಳ್ಳಿ (ಕುದ್ರುಕೋಡು ಹೊಸ್ಮನೆ)  ಇವರು ಸಂಕಲ್ಪಿಸಿ ನಿರ್ಮಿಸಿದ ನಾವುಂದ ಗ್ರಾಮದ ಕುದ್ರುಕೋಡು ಶ್ರೀ ಶಾಸ್ತಾರ ಶ್ರೀ ಸೀತಾರಾಮಚಂದ್ರ ಮತ್ತು ಶ್ರೀ ಭದ್ರಕಾಳಿ ದೇವರ ಪುನರ್‌ಪ್ರತಿಷ್ಠೆ ಕಾರ್ಯಕ್ರಮ ಹಾಗೂ ನೂತನ ಶಿಲಾಮಯ ದೇವಸ್ಥಾನ ಹಾಗೂ ಸುತ್ತುಪೌಳಿಯ ಲೋಕಾರ್ಪಣೆ ಸಮಾರಂಭವು ಎ.28 ರಿಂದ ಪ್ರಾರಂಭಗೊಂಡು ಎ.30ರ ವರೆಗೆ ನಡೆಯಲಿದೆ.

ಅರ್ಚಕರಾದ ಉಳ್ಳೂರು ವಾಸುದೇವ ಐತಾಳ್ ಮತ್ತು ಶಾರ್ಕಿ ಶಂಕರ್ ಭಟ್ ಇವರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಎ.29 ರಂದು ಬೆಳಿಗ್ಗೆ ಗುರುಗಣಪತಿ, ಪೂಜೆ ಪುಣ್ಯಾಹ ವಾಚನ, ರತ್ನನ್ಯಾಸ ಪುರಸ್ಪರ ಶ್ರೀ ದೇವರ ಪ್ರತಿಷ್ಠೆ, ತತ್ತ್ವನ್ಯಾಸ, ತತ್ತ್ವ ಕಲಶಾಭಿಷೇಕ, ಪ್ರಾಯಶ್ಚಿತ ಹೋಮ, ಶಾಂತಿ ಹೋಮಾದಿಗಳು, ಶ್ರೀ ದೇವರ ಸನ್ನಿಧಾನದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ದೇವಾಲಯ ಹಾಗೂ ಸುತ್ತ ಪೌಳಿಯ ಲೋಕಾರ್ಪಣೆ,  ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 108  ಪರಿಕರ ಕಲಶಸಹಿತ ಬ್ರಹ್ಮಕುಂಭ ಸ್ಥಾಪನೆ, ಅಗ್ನಿಜನನಪುರಸ್ಥರ, ಅಧಿವಾಸ ಹೋಮಾದಿಗಳು ನಡೆಯಿತು.ಸಂಜೆ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ ನಂತರ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಐ. ಶೆಟ್ಟಿ ಕುದ್ರುಕೋಡು ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು.

ಗುರುವಾರ ಬೆಳಿಗ್ಗೆ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಐ. ಶೆಟ್ಟಿ ಕುದ್ರುಕೋಡು ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.

ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಶ್ರೀ ಪೇಜಾವರ ಮಠ ಉಡುಪಿ ಶ್ರೀಪಾದರು ದಿವ್ಯ ಸಾನಿಧ್ಯ ಮತ್ತು ಆಶೀರ್ವಚನ ನೀಡಲಿದ್ದಾರೆ.

ನಂದಗೋಕುಲ  ಶಿಶುಮಂದಿರದ ವ್ಯವಸ್ಥಾಪಕ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸಚಿವ ಮಾಂಕಾಳ ಎಸ್. ವೈದ್ಯ, ಶಾಸಕ ಗುರುರಾಜ ಗಂಟಿಹೊಳೆ, ಮುರುಡೇಶ್ವರ ದೇವಸ್ಥಾನದ ಮ್ಯಾನೆಜಿಂಗ್ ಟ್ರಸ್ಟಿ ಸತೀಶ್ ಆರ್. ಶೆಟ್ಟಿ, ಮಾಜಿ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಕೆ. ಗೋಪಾಲ ಪೂಜಾರಿ, ಶೃಂಗೇರಿ ಶ್ರೀ ಶಾರದಾ ಪೀಠಂನ ಪ್ರಾಂತೀಯ ಧರ್ಮಾಧಿಕಾರಿ ಬಡಾಕೆರೆ ಲೋಕೇಶ ಅಡಿಗ, ಸಿಎ ಎಸ್. ಬಿ. ಶೆಟ್ಟಿ ಹುಬ್ಬಳ್ಳಿ, ಸಿಎ ಬಿ. ಸಿ. ಶೆಟ್ಟಿ ಹುಬ್ಬಳ್ಳಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಶ್ರೀ ಶಾಸ್ತಾರ, ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಐತಾಳ, ಕನಕ ಗ್ರೂಪ್ ಚೇರ್‍ಮ್‌ನ್ ಜಗದೀಶ ಶೆಟ್ಟಿ ಕುದ್ರುಕೋಡು, ದೇವಳದ ಜೀರ್ಣೋದ್ದಾರ ಸಮಿತಿ ಕಾರ್ಯಧ್ಯಕ್ಷ ಕೆ. ಆನಂದ ಶೆಟ್ಟಿ ಹುಬ್ಬಳ್ಳಿ, ಕುದ್ರುಕೋಡು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ ಶೆಟ್ಟಿ, ಉಪಾಧ್ಯಕ್ಷ ಸುಭಾಷ್ ಶೆಟ್ಟಿ, ಕಾರ್ಯದರ್ಶಿ ನಮೃತ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ರಾತ್ರಿ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಪೊರಿಪಿನ ಮಾತೆ ಜಲದುರ್ಗ ನಟಕ ಪ್ರದರ್ಶನಗೊಳ್ಳಿಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಐ. ಶೆಟ್ಟಿ ಹಾಗೂ ಕಾಯಾಧ್ಯಕ್ಷ ಕೆ. ಆನಂದ ಶೆಟ್ಟಿ ತಿಳಿಸಿದ್ದಾರೆ.

 

 

 

Leave a Reply

Your email address will not be published. Required fields are marked *

sixteen − four =