ಬೈಂದೂರು; ಸಂಪಾದನೆಯ ಒಂದಂಶವನ್ನು ಬೈಂದೂರಿನ ಜನರಿಗೆ ಸಹಾಯ, ಸಹಾಕಾರ ನೀಡುವುದರ ಮೂಲಕ ಸಮಾಜದ ಋಣವನ್ನು ತೀರಿಸುವ ಉದ್ದೇಶದಿಂದ ಬೈಂದೂರಿನಲ್ಲಿ ಹೊಸ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಶಾಖೆ ಬೈಂದೂರಿನ ಯಡ್ತರೆಯಲ್ಲಿ ಆರಂಭವಾಗಿದೆ.ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಪ್ರೀತಿಗಳಿಸಬೇಕಿದೆ.ಗ್ರಾಮೀಣ ಭಾಗಕ್ಕೆ ಇನ್ನಷ್ಟು ಆರ್ಥಿಕ ಸಹಕಾರ ದೊರೆಯುವಂತಾಗಲಿ.ಸಂಸ್ಥೆಯ ಉತ್ಕ್ರಷ್ಟತೆ ಮತ್ತು ಅತ್ಯುತ್ತಮ ಸೇವೆ ಪ್ರಗತಿಯ ಸಂಕೇತವಾಗಿದೆ.ಗ್ರಾಮದ ಜನರು ಇದನ್ನು ಸಮರ್ಪಕವಾಗಿ ಸದುಪಯೋಗಿಸಿಕೊಂಡಾಗ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ.ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.ಸಂಸ್ಥೆಗಳು ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕಿದೆ ಎಂದು ವತ್ತಿನೆಣೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಹೇಳಿದರು ಅವರು ಬೈಂದೂರು ಟೌನ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ.) ಯಡ್ತರೆ ಇದರ ಸುಪ್ರೀಮ್ ಟವರ್‍ಸ್ ನಲ್ಲಿ ನಿರ್ಮಾಣಗೊಂಡ ನೂತನ ಶಾಖೆಯನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಖ.ರೈ.ಸೇ.ಸ.ಸಂಘದ ಅಧ್ಯಕ್ಷ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಗಣಕ ಯಂತ್ರವನ್ನು ಉದ್ಘಾಟಿಸಿದರು.ನಾರಾಯಣ ಪ್ರಭು ಮಣಿಪಾಲ ಭದ್ರತಾ ಕೋಶವನ್ನು ಉದ್ಘಾಟಿಸಿದರು.ಬೈಂದೂರು ಹೋಲಿಕ್ರಾಸ್ ಚರ್ಚಿನ ಉಪಾಧ್ಯಕ್ಷ ಸ್ಟೀಪನ್ ಡಯಾಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿಯನ್ನು ಉದ್ಘಾಟಿಸಿದರು.




ಈ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ಸುರೇಶ ಹೋಬಳಿದಾರ್,ಉದ್ಯಮಿ ನಾಗರಾಜ ಕಿಣಿ ಮಣಿಪಾಲ,ಉದ್ಯಮಿ ಪಾಂಡುರಂಗ ಪಡಿಯಾರ್ ಉಪ್ಪುಂದ,ಇಸ್ರೋ ಸಂಸ್ಥೆಯ ಭಾಸ್ಕರ ಮಂಜ,ನಿರ್ದೇಶಕರಾದ ಐ.ನಾರಾಯಣ,ತಿಯೋದರ ಫೆರ್ನಾಂಡೀಸ್,ವಿಲ್ಸನ್ ಡಯಾಸ್,ಯೋಗೀಶ್ ಭಟ್,ಸುನೀಲ್ ಜಿ.ಪೂಜಾರಿ,ಗಿರೀಶ್ ಮೊಗವೀರ,ದಿನೇಶ ಗಾಣಿಗ,ಅನಿಲ್ ಶೇಟ್,ರಾಜಾರಾಮ ಪಡಿಯಾರ್,ಸುನಂದ ಗೋಪಾಲ ಗಾಣಿಗ,ಅನುಸೂಯ ಎಸ್,ಶಾಖೆಯ ಸಿಬ್ಬಂದಿಗಳಾದ ತನೋಜ,ಅಮೃತ ಉಪಸ್ಥಿತರಿದ್ದರು.



ಸಂಸ್ಥೆಯ ಅಧ್ಯಕ್ಷ ರಾಜೇಶ ಪೈಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮ ಪೂಜಾರಿ ಸಿ.ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು