ಶಿರೂರು: ಶಿರೂರಿನ ಬಿಜೆಪಿ ಮುಖಂಡ,ಉದ್ಯಮಿ ಸತೀಶ ಪ್ರಭು ರವರ ಶ್ರದ್ದಾಂಜಲಿ ಸಭೆ ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಸತೀಶ ಪ್ರಭುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಸೇರಿದಂತೆ ಶಿರೂರಿನ ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ ಕ್ಷೇತ್ರದ ಮುಂಚೂಣಿ ನಾಯಕರಾದ ಸತೀಶ ಪ್ರಭು ರವರ ಆಕಸ್ಮಿಕ ನಿಧನ ನಮಗೆಲ್ಲರಿಗೂ ಆಘಾತ ನೀಡಿದೆ.ಇವರ ಕ್ರಿಯಾಶೀಲ ವ್ಯಕ್ತಿತ್ವ, ಪ್ರಾಮಾಣಿಕವಾದ ಸೇವೆ ಎಲ್ಲರಿಗೂ ಮಾದರಿಯಾಗಿದೆ ಅವರು ಶಿರೂರಿನ ಸಂಘಟನಾ ಶಕ್ತಿ ಎಂದರು.
ಸಚಿವ ಸುನೀಲ್ ಕುಮಾರ್ ಬೇಟಿ; ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ಮಂಗಳವಾರ ಸತೀಶ ಪ್ರಭುರವರ ಮನೆಗೆ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ಇಲಾಖೆ ಹಾಗೂ ಸರಕಾರದಿಂದ ದೊರೆಯುವ ಪರಿಹಾರವನ್ನು ದೊರಕಿರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ.ಒಬ್ಬ ಪ್ರಾಮಾಣಿಕ ಕಾರ್ಯಕರ್ತನ ಅನೀರಿಕ್ಷಿತ ನಿಧನ ಸಮಾಜಕ್ಕಾದ ನಷ್ಟ.ಕುಟುಂಬಕ್ಕೆ ಮತ್ತು ಕಾರ್ಯಕರ್ತರಿಗೆ ದೈರ್ಯ ತುಂಬುವ ಕೆಲಸ ಹಿರಿಯ ನಾಯಕರಿಂದ ಸದಾ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ,ಕೃಷಿ ಅಧಿಕಾರಿ ಗಾಯತ್ರಿದೇವಿ,ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ,ಶಂಕರ ಪೂಜಾರಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಸದಾಶಿವ ಡಿ.ಪಡುವರಿ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.