ಬೈಂದೂರು; ಮಂಗಳೂರು ವಿದ್ಯುಚಕ್ತಿ ಸರಬರಾಜು ಕಂಪೆನಿ.ನಿ ಇದರ ನೂತನ 1.5 ಎಂವಿಎ,33/11 ಕೆವಿ ಕೊಲ್ಲೂರು ವಿದ್ಯುತ್ ಉಪಕೇಂದ್ರದ ಉದ್ಘಾಟನಾ ಸಮಾರಂಭ ಸೆ.25 ರಂದು ಪೂರ್ವಾಹ್ನ 9:30ಕ್ಕೆ ಕೊಲ್ಲೂರು ವಿದ್ಯುತ್ ಉಪಕೇಂದ್ರದ ಆವರಣ ಹಾಲ್ಕಲ್‌ನಲ್ಲಿ ನಡೆಯಲಿದೆ.ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್ ನೂತನ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಲಿದ್ದಾರೆ.ಸಚಿವರಾದ ಶೋಭಾ ಕರಂದ್ಲಾಜಿ,ಎಸ್.ಅಂಗಾರ,ಕೋಟ ಶ್ರೀನಿವಾಸ ಪೂಜಾರಿ,ಸಂಸದ ಬಿ.ವೈ ರಾಘವೇಂದ್ರ,ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.