ಶಿರೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಶಿರೂರು ಉದ್ಯಮಿ,ಬಿಜೆಪಿ ಮುಖಂಡ,ಸಾಮಾಜಿಕ ದುರೀಣ ಸತೀಶ ಪ್ರಭು (52) ರವರ ಅಂತಿಮ ದರ್ಶನ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಿತು.ನೂರಾರು ಅಭಿಮಾನಿಗಳು,ಹಿತೈಷಿಗಳು,ಪಕ್ಷದ ಮುಖಂಡರು,ವಿವಿಧ ನಾಯಕರು ಅಂತಿಮ ದರ್ಶನ ಪಡೆದರು.ಕಾಲೇಜು ವಿದ್ಯಾರ್ಥಿಗಳಿಂದ ಅಂತಿಮ ನಮನ ಸಲ್ಲಿಸಲಾಯಿತು.ಸತೀಶ ಪ್ರಭು ಶಿರೂರಿನ ಜನಾನುರಾಗಿ ವ್ಯಕ್ತಿಯಾಗಿದ್ದು ಆರ್.ಎಸ್.ಎಸ್ ಮುಖಂಡರಾಗಿರುವ ಜೊತೆಗೆ ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ಮುಂದಾಳುಗಳಾಗಿದ್ದರು.
ಇವರ ನಿಧನಕ್ಕೆ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವರದಿ/ಚಿತ್ರ: ಗಿರೀಶ್ ಶಿರೂರು