ಬೈಂದೂರು: ಗೋಡಾನ್‌ನಲ್ಲಿ ಇರಿಸಲಾದ ಸಾವಿರಾರು ರೂಪಾಯಿ ಮೌಲ್ಯದ ಅಡಿಕೆ ತುಂಬಿದ ಚೀಲಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಇಲ್ಲಿನ ಯಡ್ತರೆ ಗ್ರಾಮದ ಹಡವಿನಗದ್ದೆ ಎಂಬಲ್ಲಿ ನಡೆದಿದೆ.ಮಸೂದ್ ಪಟೇಲ್ ಎಂಬವರು ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ ಚೀಲ ಮಾಡಿ ಗೋಡೌನ್‌ನಲ್ಲಿ ಇಟ್ಟಿದ್ದು, ಮೇ. 15ರಿಂದ ಮೇ. 22ರ ಮಧ್ಯಾವಧಿಯಲ್ಲಿ ಗೋಡೌನ್ ಬೀಗ ಮುರಿದು ಒಳನುಗ್ಗಿದ ಕಳ್ಳರು, 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

3 + twelve =