ಬೈಂದೂರು: ಶ್ರೀ ರಾಘವೇಂದ್ರ ಸ್ವಾಮಿ ಮಠ ವತ್ತಿನೆಣೆ ಬೈಂದೂರು ಇದರ ವೃಂದಾವನ ಪುನಃ ಪ್ರತಿಷ್ಟೆ ಹಾಗೂ ಶತಕಲಶಃ ಸಹಿತ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಸೂಲಿಯಣ್ಣ ಶೆಟ್ಟಿ,ಉಪಾಧ್ಯಕ್ಷ ಎಸ್.ರಾಜು ಪೂಜಾರಿ,ಕಾರ್ಯದರ್ಶಿ ಮಂಜುನಾಥ ಶೆಟ್ಟಿ,ಸ್ವಾಗತ ಸಮಿತಿ ಸಂಚಾಲಕ ನಾಗಯ್ಯ ಶೆಟ್ಟಿ,ಸುಧಾಕರ ಪಿ.ಬೈಂದೂರು,ಪ್ರಭಾಕರ ಬಿಲ್ಲವ ಕಿಶೋರ್ ಸಸಿಹಿತ್ಲು, ರವೀಂದ್ರ ಶ್ಯಾನುಭಾಗ್,ದಿನೇಶ್ ಪಡುವರಿ,ದಿನಕರ ಶೆಟ್ಟಿ,ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ,ಪ್ರಕಾಶ ಮಾಕೋಡಿ,ನಾಗೇಶ ಮೊಗೇರ್ ಅಡಳಿತ ಸಮಿತಿ ಸದಸ್ಯರು,ಭಕ್ತಾಧಿಗಳು ಹಾಗೂ ಭಜನಾ ತಂಡದ ಸದಸ್ಯರು ಹಾಜರಿದ್ದರು.
