ಶಿರೂರು: ಅಂಬುಲೈನ್ಸ್ ಡಿಕ್ಕಿಯಾಗಿ ಟೋಲ್ ಸಿಬಂದಿ ಮೃತಪಟ್ಟ ಘಟನೆ ಶಿರೂರು ಟೋಲ್‌ಗೇಟ್ ನಲ್ಲಿ ನಡೆದಿದೆ.ಮೇ.17 ರಂದು ರಾತ್ರಿ 10:55ರ ಹೊತ್ತಿಗೆ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಅತೀ ವೇಗದಿಂದ ಬಂದ ಅಂಬುಲೈನ್ಸ್ ಚಾಲಕನ ಅಜಾಗರೂಕತೆಯಿಂದ ಎ1 ಲೈನ್ ಬದಿಯಲ್ಲಿ ನಿಂತಿದ್ದ ಸಿಬಂದಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಮಹಾರಾಷ್ಟ್ರ ಮೂಲದ ಸಂದೀಪ್ ಚಾಲಸೇ ಸೂರ್ಯವಂಶಿ (35) ಗಂಭೀರ ಗಾಯಗೊಂಡು ತಕ್ಷಣ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ತೀವೃ ರಕ್ತಸ್ರಾವ ಮತ್ತು ಗಂಭೀರ ಗಾಯಗೊಂಡಿರುವ ಕಾರಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

thirteen + 17 =