ಶಿರೂರು: ಕಳೆದ ಒಂದೆರಡು ದಿನಗಳಿಂದ ಶಿರೂರಿನ ಪ್ರತಿಷ್ಠಿತ ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಥಳಿಸಿದ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ತಕ್ಷಣ ಸ್ಪಂಧಿಸಿದ ಶಾಲಾ ಆಡಳಿತ ಮಂಡಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕನನ್ನು ಅಮಾನತು ಮಾಡಿ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಸ್ವತಂತ್ರ ಸಮಿತಿ ರಚಿಸಿದೆ.ಮಾತ್ರವಲ್ಲದೆ ಈ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ಪಟ್ಟಣ ಪ್ರದೇಶದಲ್ಲಿ ವಿಫುಲ ಅವಕಾಶಗಳಿದ್ದರು ಕೂಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ದೊರೆಯಬೇಕು ಮತ್ತು ಶಿರೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ಶಿರೂರಿನ ಅನಿವಾಸಿ ಭಾರತೀಯರು,ಶಿಕ್ಷಣ ಪ್ರೇಮಿಗಳು ಸ್ಥಾಪಿಸಿದ ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯಕರ ಕಲಿಕಾ ವಾತಾವರಣ ನಿರ್ಮಾಣ ಸಂಸ್ಥೆಯ ಪ್ರಮುಖ ದ್ಯೇಯವಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕಳೆದ ಆರೇಳು ತಿಂಗಳ ಹಿಂದೆ ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆಯ ಶಿಕ್ಷಕ ವಿನಾಯಕ ಖಾರ್ವಿ ವಿದ್ಯಾರ್ಥಿಯೊಬ್ಬನನ್ನು ಕಾಲೇಜು ಕಛೇರಿಯಲ್ಲಿ ಥಳಿಸಿದ್ದಾನೆ.ಇದು ಕಾಲೇಜಿನ  ಸಿ.ಸಿ ಕೆಮರಾದಲ್ಲಿ ರೆಕಾರ್ಡ್ ಆಗಿದ್ದು ವಿದ್ಯಾರ್ಥಿ ನಡೆಸಿದ ವಿಷಯದ ಕುರಿತು ಪಾಲಕರನ್ನು ಕರೆಸಿದ್ದು ಪ್ರಕರಣ ಇತ್ಯರ್ಥವಾಗಿತ್ತು.ಈ ಸಮಯದಲ್ಲಿ ಪ್ರಾಂಶುಪಾಲರು ಅನಾರೋಗ್ಯದ ಕಾರಣ ಽರ್ಘ ರಜೆಯಲ್ಲಿದ್ದರು ಹೀಗಾಗಿ ಪ್ರಕರಣ ಆಡಳಿತ ಮಂಡಳಿಯವರ ಗಮನಕ್ಕೆ ಬಂದಿರಲಿಲ್ಲ.

ಕಳೆದ ವಾರ ಶಾಲಾ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ ಮತ್ತು ಶಿಕ್ಷಕನ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿತ್ತು.ಈ ಕುರಿತು ವಿಷಯ ಗಮನಕ್ಕೆ ಬರುತ್ತಿದ್ದಂತೆ ಶಿಕ್ಷಕ ವಿನಾಯಕ ಖಾರ್ವಿಯನ್ನು ಅಮಾನತು ಮಾಡಲಾಗಿದ್ದು ಪ್ರಕರಣದ ವಾಸ್ತವತೆ ಕುರಿತು ತನಿಖೆ ನಡೆಸಲು ತಂಡ ರಚಿಸಲಾಗಿದೆ.ಮಾತ್ರವಲ್ಲದೆ ಶಾಲಾ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ನಕಲಿ ಖಾತೆ ಮೂಲಕ ಅಪಪ್ರಚಾರ ನಡೆಸುತ್ತಿರುವ ಕೆಲವು ವ್ಯಕ್ತಿಗಳ ಪೇಕ್ ಐಡಿ ಪತ್ತೆ ಮಾಡಿ ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಇಲಾಖೆ ಮೂಲಕ ಮಾಹಿತಿ ಪಡೆಯಲಾಗಿದೆ.ಪ್ರಕರಣದ ಕುರಿತಂತೆ ಪಾಲಕರು ಮತ್ತು ಶಿಕ್ಷಣಾಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ.ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆ ಈ ವರ್ಷ ಅತ್ಯಽಕ ನೊಂದಣಿ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆ, ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.ಪ್ರಕರಣ ಕುರಿತಂತೆ ಶಾಲಾ ಸಮಿತಿ ಸ್ಪಷ್ಟತೆ ನೀಡಿದೆ.

 

Leave a Reply

Your email address will not be published. Required fields are marked *

4 × 2 =