ಬೈಂದೂರು; ಬದುಕಿನಲ್ಲಿ ಆತ್ಮಶಕ್ತಿ ಬಹುಮುಖ್ಯವಾಗಿದೆ.ಸೋಲು ಸಹಜ ಆದರೆ ಸಕಾರಾತ್ಮಕ ಚಿಂತನೆ ಮುಖ್ಯ.ನಮ್ಮಲ್ಲಿ ಕೋಟಿಗಟ್ಟಲೆ ಹಣ ಆಸ್ತಿ ಇರಬಹುವುದು ಮುಖ್ಯವಲ್ಲ ಆದರೆ ಸಂಸ್ಕಾರ, ಗುಣ,ನಡತೆ ಮುಖ್ಯ. ಹಿರಿಯರ ಜೀವನ ನಮಗೆ ಆದರ್ಶ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂಧಿಪನಿ ಸಾಧನಶ್ರಾಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು ಅವರು ಶ್ರೀ ರಾಹುತೇಶ್ವರ ಸನ್ನಿಧಾನ ಮತ್ತು ಶ್ರೀ ರಾಮ ಭಜನಾ ಮಂಡಳಿ ರಾಹುತನಕಟ್ಟೆ ಬೈಂದೂರು ಇದರ ಶ್ರೀ ರಾಹುತೇಶ್ವರನ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,ನೂತನ ಭಜನಾ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೂತನ ಭಜನಾ ಮಂದಿರವನ್ನು ಉದ್ಘಾಟಿಸಿದರು.ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ಬಾಬು ಶೆಟ್ಟಿ,ಬಗ್ವಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ,ಗೌರವ ಸಲಹೆಗಾರ ರಾಮ ಮೊಗವೀರ ಸ್ಯಾಬ್ರಿತ್ಲು,ಮಾಜಿ ಗ್ರಾ.ಪಂ ಸದಸ್ಯ ಸುಧಾಕರ ದೇವಾಡಿಗ ಯಡ್ತರೆ,ಉದ್ಯಮಿ ನಾಗರಾಜ ಜೆ.ಮೊಗವೀರ,ದೇವಳದ ಪ್ರಧಾನ ಅರ್ಚಕ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

ಯೊಗೀಶ್ ಮೊಗವೀರ ಖಂಬದಕೋಣೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.ರಾಮ ಮೊಗವೀರ ಗರ್ಜಿನಹಿತ್ಲು ವಂದಿಸಿದರು.
ವರದಿ/ಗಿರಿ ಶಿರೂರು