ಬೈಂದೂರು; ಸಣ್ಣ ನೀರಾವರಿ ಇಲಾಖೆಯ ಯೋಜನೆಗಳು ಅನುಕೂಲವಾಗುವ ಬದಲು ಗುತ್ತಿಗೆದಾರರು ಮತ್ತು ಅಽಕಾರಿಗಳ ಹಿತಾಶಕ್ತಿಗೆ ಮೀಸಲಿರಿಸಿದೆ.ಉಡುಪಿ ಜಿಲ್ಲೆಯ 400 ಕೋಟಿಗೂ ಅಧಿಕ ಅನುದಾನದಲ್ಲಿ ಈ ಇಲಾಖೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಇದರಲ್ಲಿ ರೈತರು ಹೊರತುಪಡಿಸಿ ಉಳಿದೆಲ್ಲರು ಫಲಾನುಭವಿಗಳಾಗಿದ್ದಾರೆ.ಯಾವುದೇ ವೆಂಟೆಂಡ್ ಡ್ಯಾಮ್‌ಗಳು ರೈತರಿಗೆ ಅನುಕೂಲವಾಗಿಲ್ಲ.ಮಾತ್ರವಲ್ಲದೆ ಉದ್ದೇಶಿತ ಯೋಜನೆ ಕೂಡ ಸಾಕಾರಗೊಂಡಿಲ್ಲ.ಸಾವಿರಾರು ರೈತರಿಗೆ ಅನ್ಯಾಯವಾದರೆ ಅಧಿಕಾರಿಗಳೆ ನೇರ ಕಾರಣ ಎಂದು ಜಿಲ್ಲಾ ರೈತ ಸಂಘ ಖಂಬದಕೋಣೆ ವಲಯ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು ಅವರು ಶುಕ್ರವಾರ ಗುಡೇ ಮಹಾಲಿಂಗೇಶ್ವರ ಸಂತ್ರಸ್ಥ ರೈತರ ಹೋರಾಟ ಹೇರಂಜಾಲು ಇದರ ವತಿಯಿಂದ 72 ಕೋಟಿ ರೂಪಾಯಿ ಅನುದಾನದಲ್ಲಿ ಗುಡೇ ದೇವಸ್ಥಾನ ಏತ ನೀರಾವರಿ ಕಾಮಗಾರಿ ಜಾಕ್‌ವೆಲ್ ಸ್ಥಳಾಂತರ ಆಗ್ರಹಿಸಿ ರೈತರ ಬೈಂದೂರು ಚಲೋ ಕಾರ್ಯಕ್ರಮ ಉದ್ದೇಶಿಸಿ ಈ ಮಾತುಗಳನ್ನಾಡಿದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಗೊಂದಲಗಳಿಂದ ಯಾವುದೇ ಸಮಸ್ಯೆ ಇತ್ಯರ್ಥವಾಗುವುದಿಲ್ಲ.ರೈತರು, ಅಧಿಕಾರಿಗಳು,ಜನಪ್ರತಿನಿಧಿಗಳು ಸ್ಥಳ ಸಮೀಕ್ಷೆ ನಡೆಸಿ, ಚರ್ಚೆ ನಡೆಸಿ ಯೋಚನೆ ನಡೆಸಬೇಕಾಗಿದೆ ಎಂದರು.

ಬೈಂದೂರಿನ ಕ್ಷೇತ್ರಾದ್ಯಂತ ವ್ಯರ್ಥ ವೆಂಟೆಂಡ್ ಡ್ಯಾಮ್: ಬೈಂದೂರು ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಡೆಯುತ್ತಿರುವ ಬಹುತೇಕ ವೆಂಟೆಂಡ್ ಡ್ಯಾಮ್‌ಗಳು ಗುತ್ತಿಗೆದಾರರ ಹಿತಾಶಕ್ತಿಯಾದಂತಿದೆ.ಗುಡೇ ಮಹಾಲಿಂಗೇಶ್ವರದಲ್ಲಿ 72 ಕೋಟಿ ರೂಪಾಯಿ ಅನುದಾನದಲ್ಲಿ ಏತ ನೀರಾವರಿ ಯೋಜನೆ ನಡೆಯುತ್ತಿದ್ದು 3 ಕಿ.ಮೀ ದಂಡೆ ಹಾಕಿರುವ ಪರಿಣಾಮ ಈ ಭಾಗದ ಸಾವಿರಾರು ಎಕರೆ ನೆಲಗಡಲೆ ಕೃಷಿ ಹಾನಿಯಾಗಿವೆ.ರೈತರ ಬದುಕು ಬೀದಿಗೆ ಬಂದಿದೆ ಎಂದರು.56 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ ವೆಂಟೆಂಡ್ ಡ್ಯಾಮ್‌ನಿಂದ ವ್ಯರ್ಥವಾಗಿದೆ.ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ.ಇವುಗಳನ್ನು ವಿರೋಧಿಸಿದರು ದಬ್ಬಾಳಿಕೆ ನಡೆಸುತ್ತಾರೆ.ಬೈಂದೂರನ್ನು ಬಳ್ಳಾರಿಯಾಗಲು ಬಿಡಲಾರರು ಎಂದು ಜಿಲ್ಲಾ ರೈತ ಸಂಘ ಖಂಬದಕೋಣೆ ವಲಯ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ನೀರಾವರಿ ಇಲಾಖೆ ಅಧಿಕಾರಿಗೆ ಬಿಕ್ಷೆ ಬೇಡಿ ಲಂಚ: ಪ್ರತಿಭಟನಕಾರರು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಲಂಚ ಪಡೆದು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಸ್ಥಳಕ್ಕೆ ಆಗಮಿಸದಿರುವುದನ್ನು ಖಂಡಿಸಿ ಪ್ರತಿಭಟನಕಾರರು ಬಿಕ್ಷೆ ಸಂಗ್ರಹಿಸಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡುವಂತೆ ತಹಶೀಲ್ದಾರರ ಮೂಲಕ ಅಸಮಧಾನ ವ್ಯಕ್ತಪಡಿಸಿದರು. ಪ್ರತಿಟನೆಯ ಮೊದಲು ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಬೈಂದೂರು ಆಡಳಿತ ಸೌಧದ ವರೆಗೆ ಕಾಲ್ನಡಿಗೆ ಮೂಲಕ ತೆರಳಿ ಬೈಂದೂರು ತಹಶೀಲ್ದಾರ ಭೀಮಸೇನ ಕುಲಕರ್ಣಿ ಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಜಯಂತಿ ಐತಾಳ್, ಜಿಲ್ಲಾ ರೈತ ಸಂಘದ ಪ್ರತಿನಿಧಿ ಉದಯ ಕುಮಾರ್ ಶೆಟ್ಟಿ,ರಾಘವೇಂದ್ರ ಹೇರಂಜಾಲು,ವೇದನಾಥ ಹೇರಂಜಾಲು,ಕೃಷ್ಣ ಪೂಜಾರಿ,ಮಣಿರಾಜ್ ಹೇರಂಜಾಲು,ಕೃಷ್ಣ ಶುಕ್ರಾಸನಮನೆ,ಸುಬ್ರಹ್ಮಣ್ಯ,ರೈತ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

 

Leave a Reply

Your email address will not be published. Required fields are marked *

five × five =