ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ)ವತ್ತಿನೆಣೆ ಬೈಂದೂರು ಇದರ ಶ್ರೀ ಗುರು ಸಾರ್ವಭೌಮರ ವೃಂದಾವನ ಪುನಃ ಪ್ರತಿಷ್ಠೆ, ಶ್ರೀ ಆಂಜನೇಯ,ನವಗ್ರಹ ದೇವರ ಸನ್ನಿಧಿಯಲ್ಲಿ ಕಲಶಾಭಿಷೇಕ,ಶತಕಲಶಸಹಿತ, ಬ್ರಹ್ಮಕಲಶೋತ್ಸವ,ಮಹಾಅನ್ನಸಂತರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಮೇ.25 ರಿಂದ 29 ರ ವರೆಗೆ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಗುರುವಾರ ಗುರುರಾಯರ ಸನ್ನಿಧಿಯಲ್ಲಿ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ನಡೆಯಿತು.ಆಮಂತ್ರಣ ಬಿಡುಗಡೆಗೊಳಿಸಿದ ಸಮಿತಿಯ ಉಪಾಧ್ಯಕ್ಷ ಎಸ್.ರಾಜು ಪೂಜಾರಿ ಮಾತನಾಡಿ ಬೈಂದೂರಿನ ಕಿರು ಮಂತ್ರಾಲಯ ಅತ್ಯಂತ ಪ್ರಸಿದ್ದ ಕಾರ್ಣಿಕತೆ ಹೊಂದಿರುವ ಜೊತೆಗೆ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಶಕ್ತಿ ಸ್ಥಳವಾಗಿದೆ.ಅಚ್ಚರಿಯ ರೀತಿಯಲ್ಲಿ ಇಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳು ಗುರುರಾಯರ ಕೃಪಾಶೀರ್ವಾದದ ಸಂಕೇತವಾಗಿದೆ.ಪ್ರತಿನಿತ್ಯ ಬಹಳಷ್ಟು ಊರುಗಳಿಂದ ಹತ್ತಾರು ಭಕ್ತರು ರಾಯರ ದರ್ಶನಕ್ಕೆ ಆಗಮಿಸುತ್ತಾರೆ.ನೈಸರ್ಗಿಕ ಸೌಂದರ್ಯದ ಹಿನ್ನೆಲೆಯಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ವೃಂದಾವನದ ಪುನರ್ ಪ್ರತಿಷ್ಠೆ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ ಎಂದರು.

ಉಡುಪಿ ಪುತ್ತಿಗೆ ಮಠದ ಸಂಸ್ಥಾನ ವಿದ್ವಾಂಸ ಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳು,ಹೆರ್ಗ ಶ್ರೀ ವೇದವ್ಯಾಸ ಭಟ್ ಇವರ ನೇತ್ರತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಾಯ ನಾವಡ,ತಿರುಮಲ ಭಟ್ ಹಾಗೂ ಮುರಳಿ ನಾವಡ ಇವರ ನೇತ್ರತ್ವದಲ್ಲಿ  ಪೂಜಾ ವಿಧಿ ವಿಧಾನಗಳು ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು.

ಮೇ.25 ರಂದು ಬೆಳಿಗ್ಗೆ  ಋತ್ವಿಜರ ಸ್ವಾಗತ,ಶಿಲ್ಪಿ ಪೂಜೆ,ಆಲಯ ಪ್ರತಿಗ್ರಹ,ಮಹಾಪ್ರಾರ್ಥನೆ,ವಿವಿಧ ಧಾರ್ಮಿಕ ವಿಧಾನಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಮೇ.26 ರಂದು ಬೆಳಿಗ್ಗೆ ಪುಣ್ಯಾಹ, ದೇವನಾಂದಿ,ಕಂಕಣಬಂಧ, ಶ್ರೀ ಮಹಾಗಣಪತಿ ಯಾಗ,ಮದ್ಯಾಹ್ನ ಅನ್ನಸಂತರ್ಪಣೆ.ಸಂಜೆ ಸಂಜೆ ಮಹಿಳಾ ತಂಡಗಳಿಂದ  ಭಜನಾ ಸಂಕೀರ್ತನೆ ನಡೆಯಲಿದೆ.

ಮೇ.27 ರಂದು ಬೆಳಿಗ್ಗೆ ನವಗ್ರಹಯಾಗ,ಪುರುಷ ಸೂಕ್ತ ಯಾಗ,ವಾಯುಸ್ತುತಿ ಹೋಮ, ಶ್ರೀ ಆಂಜನೇಯ ಹಾಗೂ ನವಗ್ರಹ ದೇವರಿಗೆ ಕಲಶ ಸ್ಥಾಪನೆ, ಪೂಜಾ ವಿಧಿ ವಿಧಾನಗಳು ನಡೆಯಲಿದೆ.ಸಂಜೆ  ಆಹ್ವಾನಿತ ಮಹಿಳಾ ಮತ್ತು ಪುರುಷ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.

ಮೇ.28 ರಂದು ಬೆಳಿಗ್ಗೆ ವಾಯುಸ್ಥಿತಿ ಹೋಮ,ಕಲಶ ಪ್ರತಿಷ್ಠೆ,ಆಧಿವಾಸ ಹೋಮ, ಶ್ರೀ ಪೇಜಾವರ ಮಠಾಽಶರಿಂದ ವೃಂದಾವನ ಪ್ರತಿಷ್ಠೆ,ಕಲಶಾಭಿಷೇಕ,ಮದ್ಯಾಹ್ನ ಮಹಾಅನ್ನಸಂತರ್ಪಣೆ.ಮದ್ಯಾಹ್ನ  ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ ಹಾಗೂ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ.ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸುರಭಿ ಬೈಂದೂರು ಮತ್ತು ಸೇವಾ ಸಂಗಮ ಶಿಶುಮಂದಿರ ಬೈಂದೂರು ಇವರಿಂದ ಯಕ್ಷ-ನಾಟ್ಯ-ವೈಭವ ನಡೆಯಲಿದೆ.

ಮೇ.29 ರಂದು ಸಮಾರೋಪ ಸಮಾರಂಭದ ಅಂಗವಾಗಿ ಬೆಳಿಗ್ಗೆ ಪುಣ್ಯಾಹ,ಶತಕಲಶ ಸಹಿತ ಬ್ರಹ್ಮ ಕಲಶ ಪ್ರತಿಷ್ಠೆ,ಅಧಿವಾಸ ಹೋಮ ಶ್ರೀ ಚಿತ್ರಾಪುರ ಮಠಾಽಶರಿಂದ ವೃಂದಾವನಕ್ಕೆ ಕಲಶ ಸಹಿತ ಬ್ರಹ್ಮಕಲಶೋತ್ಸವ,ಮಾಹಪೂಜೆ,ಮದ್ಯಾಹ್ನ ಮಹಾಅನ್ನಸಂತರ್ಪಣೆ,ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಚಿತ್ರಾಪುರ ಮಠ ಧಾರ್ಮಿಕ ಆಶೀರ್ವಚನ ನೀಡಲಿದ್ದಾರೆ ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಸಂಜೆ ಶ್ರೀ ದೇವಿ ಲಲಿತ ಕಲಾ ವೃಂದ ಕಾರ್ಕಳ ಇವರಿಂದ ದಕ್ಷಯಜ್ಞೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ ಪಡುವರಿ,ಕಾರ್ಯದರ್ಶಿ ಮಂಜುನಾಥ ಶೆಟ್ಟಿ,ಸದಸ್ಯರಾದ ರವೀಂದ್ರ ಶ್ಯಾನುಭಾಗ್,ದಿನಕರ ಶೆಟ್ಟಿ,ರಾಜು ಶೆಟ್ಟಿ ಸೂರ್ಕುಂದ,ಸಂದೇಶ ಭಟ್ ಉಪ್ಪುಂದ,ಪ್ರಭಾಕರ ಬಿಲ್ಲವ,ಪ್ರದೀಪ ಶೆಟ್ಟಿ ಕಾರಿಕಟ್ಟೆ,ಗೋಪಾಲ ಗಾಣಿಗ,ಅಣ್ಣಪ್ಪ ಪೂಜಾರಿ,ಗಿರೀಶ್ ಶೇಟ್,ದಿನೇಶ ಕೆ,ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ನಾಗಯ್ಯ ಶೆಟ್ಟಿ ಶಿರೂರು ಸ್ವಾಗತಿಸಿದರು.ಪ್ರಕಾಶ ಮಾಕೋಡಿ ವಂದಿಸಿದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

5 × 5 =