ಬೈಂದೂರು: ಶ್ರೀ ಜಟ್ಟಿಗೇಶ್ವರ ಪ್ರೆಂಡ್ಸ್ ನಿರೋಡಿ ಹಾಗೂ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಚತುರ್ಥ ವರ್ಷದ ಮರಾಠಿ ಬಾಂಧವರ ಲೀಗ್ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಜಟ್ಟಿಗೇಶ್ವರ ಟ್ರೋಪಿ -2025 ಎ.12 ರಂದು ಸಂಜೆ 07 ಗಂಟೆಗೆ ನಡೆಯಲಿದೆ ಕಂಬಳಗದ್ದೆ ವಠಾರ ನಿರೋಡಿಯಲ್ಲಿ ನಡೆಯಲಿದೆ.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಲಿದ್ದು.ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಟ್ರೋಪಿ ಅನಾವರಣಗೊಳಿಸಲಿದ್ದಾರೆ.ಬೈಂದೂರು ವಲಯ ಮರಾಠಿ ಸಂಘದ ಅಧ್ಯಕ್ಷ ಬೋಜ ನಾಯ್ಕ ಅಂಕಣವನ್ನು ಉದ್ಘಾಟಿಸಲಿದ್ದು ಮುಂತಾದ ಅತಿಥಿ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಹರೀಶ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.