ಬೈಂದೂರು: ಶ್ರೀ ನಾಗಜಟ್ಟಿಗೇಶ್ವರ ಭಜನಾ ಮಂಡಳಿ ಪಡುವರಿ ಸೋಮೇಶ್ವರ ರಸ್ತೆ ಇದರ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಭಜನಾ ಕುಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಹಿರಿಯ ಭಜನಾ ಹಾಡುಗಾರರಾದ ನಾಗಪ್ಪ ಮೊಗವೀರ ಕರಾವಳಿ,ರಾಮಯ್ಯ ಪೂಜಾರಿ ದೊಂಬೆ ಹಾಗೂ ರತ್ನಾಕರ ಬಿ.ಕೆ ರವರರಿಗೆ ಉತ್ತಮ ಭಜನಾ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಈಶ್ವರ ಶೇರುಗಾರ್,ಅಧ್ಯಕ್ಷರಾದ ಸೀತಾರಾಮ ಎಚ್,ಉಪಾಧ್ಯಕ್ಷ ಸುಬ್ರಹ್ಮಣ್ಯ ಬಿ, ರಾಘವೇಂದ್ರಕೆ,ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಕೆ.ಎಚ್,ರವಿಚಂದ್ರ ಕೆ ,ದಿನೇಶ ಮೊಗವೀರ ಪಡುವರಿ,ಶಿವಾನಂದ ಹೆಚ್ ಮೊದಲಾದವರು ಉಪಸ್ಥಿತರಿದ್ದರು.