ಬೈಂದೂರು: ಶ್ರೀ ಜಟ್ಟಿಗೇಶ್ವರ ಪ್ರೆಂಡ್ಸ್ ನಿರೋಡಿ ಹಾಗೂ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಚತುರ್ಥ ವರ್ಷದ ಮರಾಠಿ ಬಾಂಧವರ ಲೀಗ್ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಜಟ್ಟಿಗೇಶ್ವರ ಟ್ರೋಪಿ -2025 ಕಂಬಳಗದ್ದೆ ವಠಾರ ನಿರೋಡಿಯಲ್ಲಿ ನಡೆಯಿತು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಕಬಡ್ಡಿ ಪಂದ್ಯಾಟ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ.ಕಬಡ್ಡಿ ಅಪ್ಪಟ ದೇಶಿಯ ಕ್ರೀಡೆಯಾಗಿದೆ.ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವುದು ಅತ್ಯಂತ ಸಂತೋಷಕರ ವಿಚಾರವಾಗಿದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಟ್ರೋಪಿ ಅನಾವರಣಗೊಳಿಸಿದರು.ಬೈಂದೂರು ವಲಯ ಮರಾಠಿ ಸಂಘದ ಅಧ್ಯಕ್ಷ ಬೋಜ ನಾಯ್ಕ ಅಂಕಣ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ
ಜಟ್ಟಿಗೇಶ್ವರ ಪ್ರೆಂಡ್ಸ್ ಅಧ್ಯಕ್ಷ ಹರೀಶ ಮರಾಠಿ,ಮಾಜಿ ಗ್ರಾ.ಪಂ ಸದಸ್ಯ ಚೆನ್ನಯ್ಯ ಪೂಜಾರಿ,ಹೊಸೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಾಗಪ್ಪ ಮರಾಠಿ,ವಾಸುದೇವ ಮರಾಠಿ ಹೊಸೂರು,ವೀರಭದ್ರ ಗಾಣಿಗ,ಸ.ಹಿ.ಪ್ರಾ.ಶಾಲೆ ಗಂಗನಾಡು ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ ಬಿಲ್ಲವ,ಮಂಜು ಪೂಜಾರಿ ಸಸಿಹಿತ್ಲು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಹಿರಿಯ ಕಬಡ್ಡಿ ಆಟಗಾರ ಗಣಪ ಮರಾಠಿ ಹಾಗೂ ಉದ್ಯಮಿ ರಾಮ ಮರಾಠಿ ಯವರನ್ನು ಸಮ್ಮಾನಿಸಲಾಯಿತು.ಕಬಡ್ಡಿ ಪಂದ್ಯಾಟದಲ್ಲಿ ಜಟ್ಟಿಗೇಶ್ವರ ನಿರೋಡಿ ಪ್ರಥಮ,ಉಗ್ರನರಸಿಂಹ ಬಂಗಣೆ ದ್ವಿತೀಯ,ಶ್ರೀ ದೇವಿ ಜನಡಕಲ್ ತೃತೀಯ ಹಾಗೂ ಆಽಶಕ್ತಿ ತುಳಸಾಣಿ ಚತುರ್ಥ ಸ್ಥಾನ ಪಡೆದರು.
ಕಿರಣ ಬಿಜೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ/ಗಿರಿ ಶಿರೂರು