ಶಿರೂರು : ಸಪರಿವಾರ ಶ್ರೀ ಸಂಕಮ್ಮ ಮಾಸ್ತಿ ದೈವಸ್ಥಾನ ಸಂಕದಗುಂಡಿ ಶಿರೂರು ಇದರ ಪುನರ್ ಪ್ರತಿಷ್ಠಾ ಶ್ರೀ ಸಂಕಮ್ಮ ಮಾಸ್ತಿ ಜಟ್ಟಿಗೇಶ್ವರ ಮತ್ತು ಹೈಗುಳಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.

ಬೆಳಿಗ್ಗೆ ಶಿರೂರು ಗ್ರಾಮ ಪುರೋಹಿತರಾದ ಸುರೇಶ ಅವಭೃತ ಇವರ ನೇತ್ರತ್ವಲ್ಲಿ ಗಣೇಶ ಪೂಜೆ, ಪುಣ್ಯಾಹ, ಶ್ರೀ ಸಂಕಮ್ಮ ಮಾಸ್ತಿ ಜಟ್ಟಿಗೇಶ್ವರ ಮತ್ತು ಹೈಗುಳಿ ಗಣಗಳ ಪುನರ್ ಪ್ರತಿಷ್ಠೆ, ಮಹಾ ಮಂಗಳಾರತಿ,ಪ್ರಸಾದ ವಿತರಣೆ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ರಾತ್ರಿ 9 ಗಂಟೆಗೆ ಶ್ರೀ ಈಶ್ವರ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಳವಾಡಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಜುನಾಥ ಪೂಜಾರಿ,ಆಡಳಿತ ಮಂಡಳಿಯ ಪದಾಧಿಕಾರಿಗಳು,ಸರ್ವ ಸದಸ್ಯರು ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

 

 

Leave a Reply

Your email address will not be published. Required fields are marked *

9 − 4 =