ಬೈಂದೂರು: ಶ್ರೀ ನಾಗಜಟ್ಟಿಗೇಶ್ವರ ಭಜನಾ ಮಂಡಳಿ ಪಡುವರಿ ಸೋಮೇಶ್ವರ ರಸ್ತೆ ಇದರ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಭಜನಾ ಕುಣಿತ ಸ್ಪರ್ಧೆ,ಸತ್ಯನಾರಾಯಣ ಪೂಜೆ ಹಾಗೂ ಯಕ್ಷಗಾನ ಕಾರ್ಯಕ್ರಮ ಏ.04 ರಿಂದ 09  ರ ವರೆಗೆ ನಡೆಯಲಿದೆ.

ಏ.08 ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮದ  ದೀಪ ಸ್ಥಾಪನೆ ಬಳಿಕ ರಾತ್ರಿ 8:30ಕ್ಕೆ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳಿಂದ ಭಜನಾ ಕುಣಿತ ಸ್ಪರ್ಧೆ ನಡೆಯಲಿದೆ.

ಏ.09 ರಂದು ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ,ಪ್ರಸಾದ ವಿತರಣೆ,ಮದ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ರಾತ್ರಿ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published. Required fields are marked *

1 + 13 =