ಶಿರೂರು: ಮಂಗಳವಾರ ಪ್ರಕಟಗೊಂಡ ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಶೇ.100 ಕ್ಕೆ 100 ಫಲಿತಾಂಶ ಗಳಿಸಿದೆ.ಒಟ್ಟು ಕಲಾ ವಿಭಾಗಹದಲ್ಲಿ 3,ವಾಣಿಜ್ಯ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗುವ ಮೂಲಕ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು 100ಕ್ಕೆ 100 ಸಾಧನೆ ಮಾಡುವಂತಾಗಿದೆ.ಈ ಶಾಲೆಯ ಕಲಾ ವಿಭಾಗದ ಬೀಬಿ ರುಕ್ಕಸಾನ 600 ರಲ್ಲಿ 552 ಅಂಕ ಹಾಗೂ ಶ್ವೇತಾ ಆರ್.ದೇವಾಡಿಗ 537 ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ.ಪಿ.ಯು.ಸಿ ವಿದ್ಯಾರ್ಥಿಗಳ ಸಾಧನೆಗೆ ಸ್ಥಳೀಯ ಗ್ರಾಮ ಪಂಚಾಯತ್, ಶಾಲಾಭಿವೃದ್ದಿ ಸಮಿತಿ,ಹಳೆ ವಿದ್ಯಾರ್ಥಿ ಸಂಘ,ಶಿಕ್ಷಣಾಭಿಮಾನಿಗಳು ಹಾಗೂ ಉಪನ್ಯಾಸಕ ವೃಂದದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
