ಶಿರೂರು: ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು ಶಿರೂರು ಇದರ 10ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಬಪ್ಪನಬೈಲುವಿನಲ್ಲಿ ನಡೆಯಿತು.
ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಘುರಾಮ ಕೆ.ಪೂಜಾರಿ ಮಾತನಾಡಿ ದೇವರ ಆರಾಧನೆ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವಂತ ಪೂಜಾ ಪುನಸ್ಕಾರಗಳು ಊರಿಗೆ ಒಳಿತನ್ನು ಮಾಡುತ್ತದೆ. ಇದರ ಜೊತೆಗೆ ಸಂಘಟನೆ ಮತ್ತು ಒಗ್ಗಟ್ಟು ಧಾರ್ಮಿಕ ಕಾರ್ಯದ ಮೂಲಕ ದೊರೆಯುತ್ತದೆ.ಭಗವಂತನ ಆರಾಧನೆಯಿಂದ ಬದುಕಿಗೆ ಬೆಳಕು ದೊರೆಯುತ್ತದೆ ಎಂದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ನಾರಾಯಣ ಎಚ್.ನಾಯ್ಕ,ಮಾಜಿ ಅಧ್ಯಕ್ಷರಾದ ಹೆಚ್.ಸುಬ್ರಾಯ ನಾಯ್ಕ ,ಯುವಕ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಕವಿತಾ ಸುಬ್ರಾಯ ನಾಯ್ಕ,ಕಾರ್ಯದರ್ಶಿ ದಿನೇಶ ಪೂಜಾರಿ,ಚಂದ್ರಶೇಖರ ಜಿ.ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನ್ನದಾನದ ಸೇವಾಕರ್ತರಾದ ಚಂದ್ರಶೇಖರ ಜಿ.ಪೂಜಾರಿ,ಹಿರಿಯ ನಾಗರೀಕರಾದ ರಾಮ ಪೂಜಾರಿ,ಯುವಕ ಮಂಡಲದ ಮಾಜಿ ಅಧ್ಯಕ್ಷ ಶಿವರಾಜ ಪೂಜಾರಿ,ಆಡಳಿತ ಮಂಡಳಿ ಮಾಜಿ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ ಹಾಗೂ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಬಿ.ಪಿ ಯವರನ್ನು ದೈವಸ್ಥಾನದ ವತಿಯಿಂದ ಸಮ್ಮಾನಿಸಲಾಯಿತು.
ಶ್ರೀಕಾಂತ ಪೂಜಾರಿ ಸ್ವಾಗತಿಸಿದರು. ಗಣೇಶ ಬಿ.ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.ಭರತ್ ಎನ್.ನಾಯ್ಕ ವಂದಿಸಿದರು.
News/Giri Shiruru
photo/Smart Studio Shiruru