ಬೈಂ ದೂರು: ಸಿದ್ದೇಶ್ವರ ಹೋಳಿ ಸಮಿತಿ ಹೊಸೂರು ಯಡ್ತರೆ ಗ್ರಾಮ ಇದರ ಹೋಳಿ ಸಂಭ್ರಮ ಹೊಸೂರಿನಲ್ಲಿ ಶನಿವಾರ ನಡೆಯಿತು.ಇಲ್ಲಿನ ಮರಾಠಿ ಸಮುದಾಯ ಪ್ರತಿ ವರ್ಷ ಹೋಳಿ ಹಬ್ಬವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದು ಒಂದು ವಾರಗಳ ಕಾಲ ವಿವಿಧ ಊರುಗಳಿಗೆ ತೆರಳಿ ಹೋಳಿ ಕುಣಿತ ನಡೆಸುತ್ತಾರೆ.ಸಮುದಾಯದ ಊರಿನ ಮುಖ್ಯಸ್ಥರ ಮನೆಯಲ್ಲಿ ಸಮಾಪನಗೊಳ್ಳಲಿದೆ.ಹೊಸೂರು ಸಿದ್ದೇಶ್ವರ ಹೋಳಿ ಸಮಿತಿ ವತಿಯಿಂದ ಪ್ರತಿ ವರ್ಷ ಅತ್ಯಂತ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿರುವುದು ಊರಿನ ಹಿರಿಮೆಯಾಗಿದೆ ಮತ್ತು ಯುವ ಸಮುದಾಯ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.







