ಬೈಂದೂರು: ಶ್ರೀನಿವಾಸ ಅಕ್ಕಿಅಂಗಡಿ ಸದ್ಬಾವನಾ ವೇದಿಕೆ,ಕುಂದ ಅಧ್ಯಯನ ಕೇಂದ್ರ ಇದರ ಸಹಯೋಗದಲ್ಲಿ  ಸೀತಾ ಶ್ರೀನಿವಾಸರವರ  ಅಮ್ಮ ಹಚ್ಚಿದ ಹಣತೆ ಕವನ ಸಂಕಲನ ಅನಾವರಣ ಕಾರ್ಯಕ್ರಮ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ನಡೆಯಿತು.

ಕುಂದ ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯದ ಆಸಕ್ತಿ ಬದುಕಿಗೆ ಉತ್ಸಾಹ ನೀಡುತ್ತದೆ.ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.ಕೃತಿ ಬಿಡುಗಡೆ ಮೂಲಕ ಸಾಹಿತಿ ಹೆಸರನ್ನು ಶಾಶ್ವತವಾಗಿ ಸಾಹಿತ್ಯ ಕ್ಷೇತ್ರಕ್ಕೆ ಅರ್ಪಣೆಯಾಗುತ್ತದೆ.ಅತ್ಯುತ್ತಮ ಕವನ ಸಂಕಲನದ ಮೂಲಕ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೀತಾರವರ ಸಾಹಿತ್ಯಾಶಕ್ತಿ ಇತರರಿಗೆ ಪ್ರೇರಣೆ ಎಂದರು.

ಬೈಂದೂರು ಶ್ರೀರಾಮ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ  ಶೇರುಗಾರ್ ಕೃತಿ ಅನಾವರಣಗೊಳಿಸಿ ಶುಭಹಾರೈಸಿದರು.ಕಸಾಪ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಅರುಣ ಕುಮಾರ್ ಶಿರೂರು ಶುಭಶಂಸನೆಗೈದರು.

ಮುಖ್ಯ ಅತಿಥಿಗಳಾಗಿ ಸಾಹಿತಿ ಮಂಜುನಾಥ ಮರವಂತೆ, ಸಾಹಿತಿ ಕೆ.ಪುಂಡಲೀಕ ನಾಯಕ್ ನಾಯ್ಕನಕಟ್ಟೆ, ಹೃದ್ರೋಗ ತಜ್ಞ  ಡಾ.ಪ್ರಭಾಕರ ಎಚ್,ಎಂ.ಗೊವಿಂದ ಮಟ್ನಕಟ್ಟೆ,ಆನಂದ ಮದ್ದೋಡಿ,ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಗಿರೀಶ ಶ್ಯಾನುಭಾಗ್,ವೆಂಕಟರಮಣ ಪಡುವರಿ,ಗಾಯತ್ರಿ ಉಪಸ್ಥಿತರಿದ್ದರು.

ಮಂಜುನಾಥ ಎ.ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕುಂದ ಅಧ್ಯಯನ ಕೇಂದ್ರದ ಸಂಚಾಲಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.ಗೀತಾ ಶೇರುಗಾರ್ ವಂದಿಸಿದರು.

 

 

 

Leave a Reply

Your email address will not be published. Required fields are marked *

19 + three =