ಶಿರೂರು: ನಾಖುದಾ ಬ್ಯಾಡ್ಮಿಂಟನ್ ಕ್ಲಬ್ ಕೆಸರಕೋಡಿ ಶಿರೂರು ಇದರ ವತಿಯಿಂದ ನಡೆದ ಹೊನಲು ಬೆಳಕಿನ ಶಟಲ್ ಪಂದ್ಯಾಟದಲ್ಲಿ ಎ.ಬಿ.ಸಿ ಬೈಂದೂರು ತಂಡದ ನವೀನ್ ಹಾಗೂ ನಿಖೀಲ್ ಪ್ರಥಮ ಸ್ಥಾನ ಪಡೆದರು.ಶಿರೂರಿನ ಜಾಶೀರ್ ಅಹ್ಮದ್ ಡಾಂಗಿ ಹಾಗೂ ಡಾಂಗಿ ಮಹ್ಮದ್ ಜಲೀಲ್ ದ್ವಿತೀಯ ಸ್ಥಾನ ಪಡೆದರು.ಎ.ಬಿ.ಸಿ ತಂಡದ ಮಂಜುನಾಥ ಹಾಗೂ ಅರುಣ್ ಕುಮಾರ್ ತೃತೀಯ ಸ್ಥಾನ ಪಡೆದರು.