ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ ಶಿರೂರು ಇದರ 25 ನೇ ವಾರ್ಷಿಕೋತ್ಸವ ಸಮಾರಂಭ ಮುದ್ರಮಕ್ಕಿಯಲ್ಲಿ ನಡೆಯಿತು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಧ.ಗ್ರಾಮಾಭಿವೃದ್ದಿ  ಯೋಜನೆಯ ಭಜನಾ ಪರಿಷತ್ ಗೌರವಾಧ್ಯಕ್ಷ  ರಘುರಾಮ್ ಕೆ.ಪೂಜಾರಿ ಮಾತನಾಡಿ ಕ್ರಿಯಾತ್ಮಕ ಕಾರ್ಯಕ್ರಮಗಳು ಊರಿಗೆ ಉತ್ತಮ ಸಂಘಟನೆ ನೀಡುತ್ತದೆ.ಧಾರ್ಮಿಕ ಕಾರ್ಯಕ್ರಮಗಳು ಊರಿಗೆ ಶ್ರೇಯಸ್ಸು ನೀಡುವ ಜೊತೆಗೆ ಸಾಂಘಿಕ ಮನೋಭಾವನೆ ಬೆಳೆಸುತ್ತದೆ.ದೇವಸ್ಥಾನದ ಕಾರ್ಯಕ್ರಮಗಳು ಸಮಾಜಕ್ಕೆ ಒಳಿತು ಮಾಡುತ್ತದೆ ಎಂದರು.

ಶ್ರೀ ಮಹಾಸತಿ ಯುವಕ ಸಂಘದ  ಅಧ್ಯಕ್ಷ ರಾಘು ಶಿರೂರು ಮಾತನಾಡಿ ಯುವ ಸಮುದಾಯದ ಒಗ್ಗಟ್ಟು ಮತ್ತು ಹಿರಿಯರ ಸಹಕಾರ ಗ್ರಾಮೀಣ ಭಾಗದ ಅಭಿವೃದ್ದಿಗೆ ಸಹಕಾರಿಯಾಗಿದೆ.ಸಂಘಟನಾತ್ಮಕ ಚಟುವಟಿಕೆ ಸಾರ್ಥಕ ಬೆಳ್ಳಿ ಹಬ್ಬದ ಸಂಭ್ರಮ ಕಂಡಿದೆ ಎಂದರು.

ಈ ಸಂದಭ೯ದಲ್ಲಿ ಶಿರೂರು  ಗ್ರಾಮ ಪಂಚಾಯತ್ ಅಧ್ಯಕ್ಷೆ  ನಾಗರತ್ನ ಆಚಾರ್ಯ, ಬೈಂದೂರು ಠಾಣಾಧಿಕಾರಿ ತೀಮ್ಮೆಶ್ ಬಿ.ಎನ್  ,ಶಿರೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗಜೇಂದ್ರ ಬೇಲೆಮನೆ, ಗ್ರಾ. ಪಂ ಸದಸ್ಯ ಲಿಂಗಪ್ಪ ಆರ್.ಮೇಸ್ತ  ಉಪಸ್ಥಿತರಿದ್ದರು.

ಬಾಲರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸುಧಾಕರ ಸ್ವಾಗತಿಸಿದರು.ಮಂಜುನಾಥ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.ಕೃಷ್ಣ  ಪೂಜಾರಿ ವಂದಿಸಿದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

seventeen + ten =