ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿದೆ.ಒಟ್ಟು ಎಲ್ಲಾ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.ಕಾಂಗ್ರೆಸ್ ಬೆಂಬಲಿತ ಹಾಗೂ ಸಮನ್ವಯ ಸಹಕಾರಿ ಬಳಗ ಎಲ್ಲಾ 13 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ.ಸಾಮಾನ್ಯ ಕ್ಷೇತ್ರದಿಂದ ಟಿ. ನಾರಾಯಣ ಹೆಗ್ಡೆ, ಎಮ್. ಎಚ್. ಗುರುದತ್ತ,ಅರುಣ ಕುಮಾರ್ ಶಿರೂರು,ವಸಂತ ಕುಮಾರ್ ಶೆಟ್ಟಿ, ವೆಂಕ್ಟ ಪೂಜಾರಿ, ಡಿ. ಸದಾಶಿವ ಶೇರುಗಾರ್, ಹೆರಿಯ ದೇವಾಡಿಗ, ಹಿಂದುಳಿದ ವರ್ಗ ಕ್ಷೇತ್ರದಿಂದ ಚಿಕ್ಕು ಪೂಜಾರಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ನಾಗರಾಜ ಶೆಟ್ಟಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶಂಕರ ನಾಯ್ಕ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸತೀಶ್, ಮಹಿಳಾ ಕ್ಷೇತ್ರದಿಂದ ಜ್ಯೋತಿ ಪೂಜಾರಿ, ಎಚ್. ವಿಜಯ ಶೇರುಗಾರ್ ಆಯ್ಕೆಯಾದರು.

ಯಡ್ತರೆ ಬಂಟರ ಭವನದಲ್ಲಿ ಸಂಘದ ಚುನಾವಣೆ ನಡೆದಿದ್ದು ಚುನಾವಣಾ ಅಧಿಕಾರಿಯಾಗಿ, ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿ,ಎಂ ಚುನಾವಣೆಯನ್ನು ನಡೆಸಿಕೊಟ್ಟರು.

ಸಂದರ್ಭದಲ್ಲಿ ಮಾತನಾಡಿದ ಟಿ.ನಾರಾಯಣ ಹೆಗ್ಡೆ ಜಿಲ್ಲಾ ಸಹಕಾರಿ ಕ್ಷೇತ್ರದಲ್ಲಿ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ವಿಶೇಷ ಹಿರಿಮೆ ಇದೆ.ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ನಮ್ಮ ತಂಡ ಗೆಲುವು ಸಾಧಿಸಿದೆ. ನಿಟ್ಟಿನಲ್ಲಿ ಪ್ರಯತ್ನಿಸಿದ ಎಲ್ಲಾ ಕಾರ್ಯಕರ್ತರಿಗೂ,ಸದಸ್ಯ ಮತದಾರ ಬಾಂಧವರಿಗೂ ವಿಶೇಷ ವಂದನೆಗಳು.ನೂತನ ತಂಡದ ಸಹಕಾರದಲ್ಲಿ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇನ್ನಷ್ಟು ಜನಪರ ಹಾಗೂ ಸಹಕಾರಿ ಕಾರ್ಯದಲ್ಲಿ ಸದಸ್ಯರಿಗೆ ಸೇವೆ ನೀಡಲಿದ್ದೇವೆ ಎಂದರು.

ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಶಿರೂರು ನಿರ್ದೇಶಕರಾಗಿ ಆಯ್ಕೆ: ಶಿರೂರು ಭಾಗದ ಯುವ ಮುಂದಾಳು,ಪತ್ರಕರ್ತ ಹಾಗೂ ಸಮಾಜ ಸೇವಕ ಅರುಣ್ ಕುಮಾರ್ ಶಿರೂರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಶಿರೂರಿನಿಂದ ಚಿಕ್ಕು ಪೂಜಾರಿ ಹಾಗೂ ಅರುಣ್ ಕುಮಾರ್ ಶಿರೂರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಬೈಂದೂರು ಹಾಗೂ ಶಿರೂರಿನಲ್ಲಿ ಸಂಭ್ರಮಾಚರಣೆ;ನಾರಾಯಣ ಹೆಗ್ಡೆ ಯವರ ತಂಡದ ಅಭಿಮಾನಿಗಳು ಯಡ್ತರೆ ಬಂಟರ ಭವನದಿಂದ ಯಡ್ತರೆ ಕ್ರಾಸ್ ವರೆಗೆ ಮೆರವಣಿಗೆ ನಡೆಸಲಾಯಿತು.ಶಿರೂರು,ದೊಂಬೆ,ಕರಾವಳಿ,ಪೇಟೆ,ಮಾರ್ಕೆಟ್,ತೂದಳ್ಳಿ ಕ್ರಾಸ್,ಶಿರೂರು ಟೋಲ್ ಗೇಟ್ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಗೆ ನಡೆದ ಚುನಾವಣೆ ಯ ಫಲಿತಾಂಶ
*ಅರುಣ್ ಕುಮಾರ್ 1291*
*MH ಗುರುದತ್ 1267*
ಚಂದ್ರ ದೇವಾಡಿಗ 602
*ನಾರಾಯಣ ಹೆಗ್ಡೆ 1473*
*ವಸಂತ ಕುಮಾರ್ ಶೆಟ್ಟಿ 1222*
*ವೆಂಕ್ಟ ಪೂಜಾರಿ 1309*
ಶಂಕರ ದೇವಾಡಿಗ 691
ಸದಾನಂದ 812
*ಸದಾಶಿವ ಡಿ 1247*
ಸುಬ್ರಾಯ ಸೋಡಿತಾರ್ 676
ರವೀಂದ್ರ ಶೆಟ್ಟಿ 719
*ಹೆರಿಯ ದೇವಾಡಿಗ 1247*
ಹಿಂದುಳಿದ A
*ಚಿಕ್ಕು ಪೂಜಾರಿ 1316*
ಸಾಯಿ ಕುಮಾರ್ 791
ಹಿಂದುಳಿದ ಬ
*ನಾಗರಾಜ್ ಶೆಟ್ಟಿ 1385*
ರಘುರಾಮ್ ಶೆಟ್ಟಿ 711
ಮಹಿಳಾ
*ಜ್ಯೋತಿ ಪೂಜಾರಿ 1450*
*H ವಿಜಯಾ 1329*
ಜ್ಯೋತಿ ಮೊಗವೀರ 745
SC ಮೀಸಲು
ಲೋಕೇಶ್ 730
*ಸತೀಶ್ ಯಡ್ತರೆ 1370*
ST ಮೀಸಲು
*ಶಂಕರ್ ನಾಯ್ಕ್ 1380*
ಹೂವಯ್ಯ ಮರಾಠಿ 726

ವರದಿ/ಚಿತ್ರ: ಗಿರಿ ಶಿರೂರು

 

Leave a Reply

Your email address will not be published. Required fields are marked *

sixteen − three =