ಬೈಂದೂರು: ಚಿರತೆಯೊಂದು ಬಾವಿಗೆ ಬಿದ್ದು ಅರಣ್ಯ ಇಲಾಖೆ ಅಧೀಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಬೈಂದೂರು ಗ್ರಾಮದ ಗೊಳಿಬೇರು ಎಂಬಲ್ಲಿ ನಡೆದಿದೆ.ಇಲ್ಲಿನ ರಾಮ ಪೂಜಾರಿ ಮನೆ ಬಾವಿ ಯಲ್ಲಿ ಚಿರತೆ ಬಿದ್ದಿದ್ದು ತಕ್ಷಣ ಅರಣ್ಯ ಇಲಾಖೇಯ ಅದಿಕಾರಿಗಳಿಗೆ ಮಾಹಿತಿ ನೀಡಲಾಯಿತು.ಸ್ಥಳಕ್ಕೆ ಬೇಟಿ ನೀಡಿದ ಸಿಬಂಧಿಗಳು ಬಾವಿಯ ಒಂದು ಬಳಿಯ ಪೊಟ ರೆ ಯಲ್ಲಿ ಚಿರತೆ ಕುಳಿತಿರುವದು ಕಂಡು ಬಂದಿದ್ದಿದು ರಕ್ಷಣಾ ಕಾರ್ಯದ ಮೂಲಕ ಸುರಕ್ಷತವಾಗಿ ಸೆರೆಹಿಡಿದು ಸಂರಕ್ಷಿಸಿದ್ದಾರೆ.
ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಹರೀಶ್ ವಿ,ಗಸ್ತು ಅರಣ್ಯ ಪಾಲಕರಾದ ಮಂಜುನಾಥ ನಾಯ್ಕ,ಶಂಕರ್, ಅರಣ್ಯ ಇಲಾಖೆಯ ಸಿಬಂದಿಗಳು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
