ಬೈಂದೂರು; ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸೋಮೇಶ್ವರ ಗುಡ್ಡ ಕುಸಿಯುತ್ತಿದ್ದು ಈ ಸ್ಥಳಕ್ಕೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಶನಿವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಮಾತನಾಡಿದ ಅವರು ಈಗಾಗಲೇ ಕುಂದಾಪುರ ಸಹಾಯಕ ಕಮಿಷನರ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು ಇಂದು ಉಡುಪಿ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಲಿದ್ದೇನೆ.ಮಾತ್ರವಲ್ಲದೆ ಇಲಾಖೆ ಈ ಬಗ್ಗೆ ಸೂಕ್ತ ಮುಂಜಾಗೃತೆ ಕ್ರಮ ವಹಿಸಿಕೊಳ್ಳದಿರುವುದರಿಂದ ಈ ಅವಘಡ ಸಂಭವಿಸಿದೆ.ಮಾತ್ರವಲ್ಲದೆ ದೊಂಬೆ ರಸ್ತೆ ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಮತ್ತು ಶೀಘ್ರ ವ್ಯವಸ್ಥೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ತಿಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಎಸ್.ರಾಜು ಪೂಜಾರಿ,ಬಾಬು ಶೆಟ್ಟಿ,ಸದಾಶಿವ ಡಿ.ಪಡುವರಿ,ನಾಗರಾಜ ಗಾಣಿಗ,ಸಂಜೀವ ಮೊಗವೀರ,ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಮೊದಲಾದವರು ಹಾಜರಿದ್ದರು.

News/Giri Shiruru

 

Leave a Reply

Your email address will not be published.

eighteen − twelve =