ಶಿರೂರು: ಶನಿವಾರ ಬೆಳಿಗ್ಗೆಯಿಂದ ಬೈಂದೂರು ಹಾಗೂ ಶಿರೂರು ವ್ಯಾಪ್ತಿಯಲ್ಲಿ ವಿಪರೀತ ಗಾಳಿ ಮಳೆ ಸುರಿಯುತ್ತಿದ್ದು ಬಹುತೇಕ ತಗ್ಗು ಪ್ರದೆಶಗಳು ಜಲಾವೃತಗೊಂಡಿದೆ.ಶಿರೂರು ಕೆಳಪೇಟೆ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ನೇರಳೆ ಮರ ಉರುಳಿ ಬಿದ್ದಿದೆ ಇದರಿಂದ ಸುಮಾರು 20 ನಿಮಿಷ ಸಂಚಾರಕ್ಕೆ ತಡೆ ಉಂಟಾಯಿತು.ಶಿರೂರು ಸಮೀಪದ ಮೇಲ್ಪಂಕ್ತಿ ಹಾಗೂ ಬುಕಾರಿ ಕಾಲೋನಿಯಲ್ಲಿ ಸಾಗುವಾನಿ ಮರ ಉರುಳಿ ಬಿದ್ದಿದ್ದು ವಿದ್ಯುತ್ ತಂತಿಯ ಮೇಲೆ ಮರ ಉರುಳಿ ಬಿದ್ದಿದೆ ಹಾಗೂ ಹಲವು ಕಡೆ ತೆಂಗಿನ ಮರಗಳು ಕೂಡ ಉರುಳಿ ಬಿದ್ದಿದೆ.ಮಳೆ ಪ್ರಮಾಣ ಇನ್ನು ಕಡಿಮೆಯಾಗದ ಪರಿಣಾಮ ಬಹುತೇಕ ಕಡೆ ಮುಂಗಾರು ಬಿತ್ತನೆ ಕೂಡ ನೀರು ಪಾಲಾಗಿದೆ.