ಬೈಂದೂರು: ಮಕ್ಕಳ ಹಕ್ಕುಗಳ ಸಮನ್ವಯ,ಎಸ್.ಡಿ.ಎಮ್.ಸಿ.ಸಿ.ಎಫ್ ಹಾಗೂ ಎಸ್.ಡಿ.ಎಮ್.ಸಿ ಸಮನ್ವಯ ವೇದಿಕೆಯ ಮಹಾಪೋಷಕರು ಮತ್ತು ಶಿಕ್ಷಣ ಅಭಿವೃದ್ದಿ ತಜ್ಞರಾದ ಡಾ. ವಿ.ಪಿ ನಿರಂಜನ ಆರಾಧ್ಯ ರವರ ಮಾರ್ಗದರ್ಶನದಲ್ಲಿ 2024ರ ಲೋಕಸಭಾ ಚುನಾವಣೆಗೆ ಮಕ್ಕಳ ಪ್ರಣಾಳಿಕೆಯನ್ನು ಪ್ರತಿ ರಾಜಕೀಯ ಪಕ್ಷಗಳು ನೀಡಬೇಕು ಹಾಗೂ 18 ವರ್ಷದೊಳಗಿನ ಮಕ್ಕಳು 18 ಪ್ರಮುಖ ಬೇಡಿಕೆಗಳ ಹಕ್ಕೋತ್ತಾಯದ ಕುರಿತು ಬೈಂದೂರು ತಾಲೂಕು ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಯಿತು.ಈ ಸಂದರ್ಭದಲ್ಲಿ ಮಕ್ಕಳ ಆಗ್ರಹಗಳನ್ನು ಮನಗಂಡು ಪ್ರಾಮುಖ್ಯತೆ ನೀಡುವ ಉದ್ದೇಶದಿಂದ 18 ಬೇಡಿಕೆಯ ಹಕ್ಕೋತ್ತಾಯ ನೀಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ  ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷೆ ಜ್ಯೋತಿ ಜಯರಾಮ್ ಶೆಟ್ಟಿ,ಜಿಲ್ಲಾ ಸಂಚಾಲಕರಾದ ಹರಿಶ್ಚಂದ್ರ ಆಚಾರ್ಯ,ಜಿಲ್ಲಾ ಸಹ ಕಾರ್ಯದರ್ಶಿ ಸುಮಾ ಆಚಾರ್,ಸದಸ್ಯರಾದ ಶಾಂತಾರಾಮ ಉಪಸ್ಥಿತರಿದ್ದರು.

 

 

Leave a Reply

Your email address will not be published.

5 × 2 =