ಬೈಂದೂರು: ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ ಇದರ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಕಾರಿಗಳ ಪದಪ್ರಧಾನ ಸಮಾರಂಭ ಬಂಟರಯಾನೆ ನಾಡವರ ಸಭಾಭವನ ಯಡ್ತರೆಯಲ್ಲಿ ನಡೆಯಿತು.

ನೂತನ ಪದಾಧಿಕಾರಿಗಳ ಪದಪ್ರಧಾನ  ಸಮಾರಂಭವನ್ನು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಮೊಗವೀರ ಯುವ ಸಂಘಟನೆಯ ಶ್ಲಾಘನೀಯ ಕಾರ್ಯಗಳ ಮೂಲಕ ಮಾದರಿ ಸಂಘಟನೆಯಾಗಿ ಬೆಳೆದು ನಿಂತಿದೆ.ಸಂಘಟನೆ ಮತ್ತು ಸಮುದಾಯದ ಹಿತದೃಷ್ಟಿಯಿಂದ ಬೈಂದೂರು ಭಾಗದಲ್ಲಿ ಯುವ ಸಂಘಟನೆ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವೆ ನೀಡುತ್ತಿದೆ.ಸಮಾಜದಲ್ಲಿ ಅಶಕ್ತರ ಹಾಗೂ ಆರೋಗ್ಯ,ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ಸೇವೆ ನೀಡಿದಾಗ ಅವರ ಭವಿಷ್ಯ ರೂಪಿಸಿದೆ ಸಂತೃಪ್ತಿ ದೊರೆಯುತ್ತದೆ.ಹೀಗಾಗಿ ನೂತನ ಪದಾಧಿಕಾರಿಗಳ ತಂಡ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುತಿಸುಕೊಳ್ಳುವಂತಾಗಲಿ ಎಂದರು.

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ನೂತನ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಮ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ನಿಕಟಪೂರ್ವಾಧ್ಯಕ್ಷ ರವಿರಾಜ್ ಚಂದನ್ ಕಳವಾಡಿ,ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ನಿಕಟಪೂರ್ವಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ,ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಪುತ್ರನ್ ಬೆಳಂಪಳ್ಳಿ,ಉಡುಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ರವೀಶ್ ಕೊರವಡಿ,ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ರಾಮ.ಎಚ್.ಮೊಗವೀರ ಕಳವಾಡಿ,ಉದ್ಯಮಿ ಕೃಷ್ಣ ಬಿಂದುಮನೆ,ಮಾಜಿ ಸೈನಿಕ ಮಹಾಬಲ ಎನ್.ಕಳವಾಡಿ,ಜಿ.ಪಂ ಮಾಜಿ ಸದಸ್ಯ ಮದನ್ ಕುಮಾರ್ ಉಪ್ಪುಂದ,ಕೃಷ್ಣ ಮೊಗವೀರ ಮೆಸ್ಕಾಂ ಬೈಂದೂರು,ರಾಮ ಗರ್ಜಿನಹಿತ್ಲು,ನಿಕಟಪೂರ್ವ ಕಾರ್ಯದರ್ಶಿ ಗೌತಮ್ ತಗ್ಗರ್ಸೆ,ನಿಯೋಜಿತ ಕೋಶಾಧಿಕಾರಿ ನಾಗರಾಜ ಕೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿಕಟಪೂರ್ವಾಧ್ಯಕ್ಷ ರವಿರಾಜ್ ಚಂದನ್ ಕಳವಾಡಿ ಯವರು ನಿಯೋಜಿತ ಅಧ್ಯಕ್ಷರಾದ ಸೋಮಶೇಖರ ಜಿ.ಕಸ್ಟಮ್ ಯವರಿಗೆ ಅಧಿಕಾರ ಹಸ್ತಾಂತರಿಸಿದರು ಹಾಗೂ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಿಸಿದರು.

ನಿಯೋಜಿತ ಕಾರ್ಯದರ್ಶಿ ಚಂದ್ರಶೇಖರ ಸೂರ್ಕುಂದ ಸ್ವಾಗತಿಸಿದರು.ಉಪನ್ಯಾಸಕ ಪಾಂಡುರಂಗ ಮೊಗವೀರ ತಗ್ಗರ್ಸೆ ಕಾರ್ಯಕ್ರಮ ನಿರ್ವಹಿಸಿದರು.ಮಾಜಿ ಅಧ್ಯಕ್ಷ ಗಂಗಾಧರ ಮೊಗವೀರ ಪಡುವರಿ ವಂದಿಸಿದರು.

ವರದಿ/ಗಿರಿ ಶಿರೂರು

ಚಿತ್ರ: ಶಂಕರ್ ಬೈಂದೂರು

 

Leave a Reply

Your email address will not be published. Required fields are marked *

eighteen − 8 =