ಶಿರೂರು; ಜೆಸಿಐ ಶಿರೂರು ರೂರಲ್ ಇದರ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಾಧಕರಿಗೆ ಸಮ್ಮಾನ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ ಯುವಶಕ್ತಿ ಸಭಾವೇದಿಕೆ ಕರಾವಳಿಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಅಶ್ವಿನಿ ಮಾತನಾಡಿ ಮಹಿಳೆ ಸಮಾಜದ ಜೊತೆಗೆ ಕುಟುಂಬ ನಿರ್ವಹಣೆಯ ಜವಬ್ದಾರಿ ಇದೆ.ಒತ್ತಡದ ಬದುಕಿನ ಜೊತೆಗೆ ಮಾನಸಿಕ ಮತ್ತು ಆರೋಗ್ಯ ಜಾಗೃತಿ ಬಹುಮುಖ್ಯ.ಸಂಪ್ರದಾಯದ ಆಚರಣೆಗಳು ನಮ್ಮ ಆರೋಗ್ಯದ ಪೂರಕವಾಗಿ ರೂಪಿತವಾಗಿರುವಂತದ್ದು ಮತ್ತು ಪುರುಷರಿಗೆ ಸರಿಸಮಾನವಾಗಿ ಕರ್ತವ್ಯ ನಿರ್ವಹಿಸುವ ಮಹಿಳೆ ಆರೋಗ್ಯ ಜಾಗೃತಿ ಕೂಡ ಬಹುಮುಖ್ಯ.ಜೆಸಿಐ ಸಂಸ್ಥೆ ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಮಹಿಳಾ ಜಾಗೃತಿ ಪ್ರಯತ್ನ ಮಾಡಿರುವುದು ಅಭಿನಂದನೀಯವಾಗಿದೆ ಎಂದರು.
ಶಿರೂರು ಜೆಸಿಐ ಅಧ್ಯಕ್ಷ ಸತೀಶ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷ ನಾಗೇಂದ್ರ ಪ್ರಭು ಹಾಗೂ ನಿಕಟಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಲಕ್ಷ್ಮೀ ಮೊಗೇರ್,ಆರೋಗ್ಯ ಸುರಕ್ಷಾ ಅಧಿಕಾರಿ ದಿವ್ಯ ಮೊಗೇರ್ ಕರಾವಳಿ ಹಾಗೂ ಅಡುಗೆ ಸಹಾಯಕಿ ಸುಜಾತ ಮೇಸ್ತ ರವರನ್ನು ಸಮ್ಮಾನಿಸಲಾಯಿತು ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಜೇಸಿರೇಟ್ ಅಧ್ಯಕ್ಷೆ ಲತಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಯಂತ ಪೂಜಾರಿ ವಂದಿಸಿದರು.
News/Giri shiruru
pic/Suresh makodi