ಬೈಂದೂರು: ಶಿರೂರು ಕಳಿಹಿತ್ಲು- ಅಳ್ವೆಗದ್ದೆ ಅಳಿವೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕಳಿಹಿತ್ಲು ನಿವಾಸಿ ಪ್ರಸ್ತುತ ಜೊಗೂರ್ ನಲ್ಲಿ ವಾಸವಾಗಿರುವ ನೇಜಿ ಮುಹಮ್ಮದ್ ರಿಝ್ವಾನ್(36) ಎನ್ನುವ ಮೃತರು ಅವಿವಾಹಿತರಾಗಿದ್ದು, ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ರಾತ್ರಿ 8 ಗಂಟೆಯ ಸುಮಾರಿಗೆ ಕಳಿಹಿತ್ಲು ಕಡಲ ಕಿನಾರೆಗೆ ಹಾಕಲಾಗಿರುವ ಶಿಲೆ ಕಲ್ಲಿನ ಮೇಲೆ ನಡೆದು ಹೋಗುವಾಗ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.