ಶಿರೂರು: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಊರಿನ ಹಿತೈಷಿಗಳು ಶಿರೂರು ಮಾರ್ಕೆಟ್ ಬಳಿ ನಿರ್ಮಿಸಿದ ನೂತನ ಬಸ್ಸು ನಿಲ್ದಾಣವನ್ನು ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿರೂರಿನ ಅಭಿವೃದ್ದಿಗಾಗಿ ಗ್ರಾಮ ಪಂಚಾಯತ್ ಅವಿರತವಾಗಿ ಶ್ರಮಿಸುತ್ತಿದೆ.ಇದರ ಜೊತೆಗೆ ದೇಶ ವಿದೇಶದಲ್ಲಿರುವ ಅನೇಕ ಶಿರೂರಿಗರು ನಮ್ಮೂರಿನ ಅಭಿವೃದ್ದಿಗಾಗಿ ಕೈಜೋಡಿಸುತ್ತಿರುವುದು ಬಹಳ ಹೆಮ್ಮೆ ಎಂದರು.
ಶಿರೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಜಿ.ಯು ದಿಲ್‌ಶಾದ್ ಬೇಗಂ ಮಾತನಾಡಿ ಊರಿನ ಹಿತೈಷಿಗಳ ಹೆಸರಿನಲ್ಲಿ ಹುಟ್ಟೂರಿನ ಪ್ರೀತಿಗಾಗಿ ಕೊಡುಗೆ ನೀಡಿದ ದಾನಿಗಳಿಗೆ ಕೃತಜ್ಞತೆ ತಿಳಿಸಿದರು.
ಗ್ರಾ.ಪಂ ಸದಸ್ಯ ಮುಕ್ರಿ ಅಲ್ತಾಫ್ ಮಾತನಾಡಿ ಈಗಾಗಲೇ ಶಿರೂರಿನ ನಾಲ್ಕು ಕಡೆ ಬಸ್ಸು ನಿಲ್ದಾಣ ನಿರ್ಮಿಸುವ ಬೇಡಿಕೆ ಬಂದಿತ್ತು.ಶಿರೂರು ಕೆಳಪೇಟೆಯಲ್ಲಿ ಮಾರ್ಕೆಟ್ ಹಾಗೂ ಕರಿಕಟ್ಟೆಯಲ್ಲಿ ನಿಗಧಿಪಡಿಸಲಾಗಿದೆ.ಅವುಗಳಲ್ಲಿ ಶಿರೂರು ಕೆಳಪೇಟೆಯಲ್ಲಿ ಶಿವಮೊಗ್ಗ ಲೋಕಸಭಾ ಸಂಸದರ ಅನುದಾನದಿಂದ ನಿರ್ಮಾಣವಾಗಲಿದೆ.ಊರಿನ ಹಿತೈಷಿಗಳು ಒಟ್ಟಾಗಿ ನೀಡಿರುವ ಈ ಕೊಡುಗೆ ಇತರ ಗ್ರಾಮಗಳಿಗೆ ಮಾದರಿಯಾಗಿದೆ.ಸದ್ಯದಲ್ಲೆ ಶಿರೂರು ಕರಿಕಟ್ಟೆಯಲ್ಲಿ ಎರಡು ನೂತನ ತಂಗುದಾಣ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಲಿಂಗಪ್ಪ ಮೇಸ್ತ,ಶಂಕರ ಮೇಸ್ತ,ಸಂದ್ಯಾ,ಮಹ್ಮದ್ ಗೌಸ್,ಸಿದ್ದೀಕ್ ಶಿರೂರು,ಶಕೀಲ್ ಅಹ್ಮದ್,ಶೋಯಿಬ್ ಅರೆಹೊಳೆ,ರಘುರಾಮ ಕೆ.ಪೂಜಾರಿ,ಗ್ರಾ.ಪಂ ಸಿಬಂದಿ ಶಂಕರ ಬಿಲ್ಲವ,ಉದ್ಯಮಿ ದಿನೇಶ್ ಕುಮಾರ್ ಶುಭಹಾರೈಸಿದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಅಲ್ತಾಫ್ ವಂದಿಸಿದರು.
News/pic: Giri shiruru