ಬೈಂದೂರು; ಬೈಂದೂರಿನ ಪ್ರಸಿದ್ದ ಸಂಸ್ಥೆಗಳಲ್ಲೊಂದಾದ ಲಾವಣ್ಯ (ರಿ.)ಬೈಂದೂರು ಇದರ 47ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2024 ನಾಟಕೋತ್ಸವ ಮತ್ತು ಜಾನಪದ ಉತ್ಸವ ಕಾರ್ಯಕ್ರಮ ಮಾರ್ಚ್ 02 ರಿಂದ 06 ರ ವರೆಗೆ ಸಂಜೆ 6:30ಕ್ಕೆ ದೂರು ಶಾರದಾ ವೇದಿಕೆಯಲ್ಲಿ ನಡೆಯಲಿದೆ.
ಮಾ.02 ರಂದು ಸಂಜೆ ಬೈಂದೂರು ಲಾವಣ್ಯ ಸಂಸ್ಥೆಯ 47ನೇ ವರ್ಷದ ನಾಟಕೋತ್ಸವ ಸಮಾರಂಭವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ಜಯಶೀಲ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಬೈಂದೂರು ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಶುಭಶಂಸನೆಗೈಯಲಿದ್ದಾರೆ ಹಾಗೂ ಮುಂತಾದ ಗಣ್ಯರು ಆಗಮಿಸಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯ (ರಿ.)ಬೈಂದೂರು ಇವರ ನಾಗೇಂದ್ರ ಬಂಕೇಶ್ವರ ನಿರ್ದೇಶನದ ಕಂಸಾಯಣ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.03 ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ರಾಜೇಂದ್ರ ಕಾರಂತ ಬೆಂಗಳೂರು ನಿರ್ದೇಶನದ ಚಿತ್ತಾರ ಬೆಂಗಳೂರು ಇವರಿಂದ ಸುಮ್ಮನೆ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.04 ರಂದು ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಡಾ.ಶ್ರೀಪಾದ ಭಟ್ ನಿರ್ದೇಶನದ ಕಣಿವೆ ಹಾಡು ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.05 ರಂದು ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡಬಿದಿರೆ ಇವರಿಂದ ಡಾ.ಜೀವನ ಸುಳ್ಯ ನಿರ್ದೇಶನದ ನಾಯಿಮರಿ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.06 ರಂದು ರಂದು ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಶೆಟ್ಟಿ ಶುಭಶಂಸನೆಗೈಯಲಿದ್ದಾರೆ.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ.ಪೆಡೂರು ಮೇಳೆದ ವ್ಯವಸ್ಥಾಪಕ ಕರುಣಾಕರ ಶೆಟ್ಟಿ,ಮೌರಿಕಾರ ಶೇಷ ದೇವಾಡಿಗ ಹಾಗೂ ಸಮಾಜ ಸೇವಕ ಫಯಾಜ್ ಅಲಿ ಯವರನ್ನು ಸಮ್ಮಾನಿಸಲಾಗುವುದು.ಬಳಿಕ ಕರ್ನಾಟಕ ಜಾನಪದ ಪರಿಷತ್ ಉಡುಪಿ ಇದರ ಸಹಯೋಗದೊಂದಿಗೆ ಕಲಾಯಂ ಉಡುಪಿ ಇವರಿಂದ ಜಾನಪದ ವೈವಿದ್ಯ ಕಾರ್ಯಕ್ರಮ ನಡೆಯಲಿದೆ ಎಂದು ಬೈಂದೂರು ಲಾವಣ್ಯ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.