ಬೈಂದೂರು: ಜಿಲ್ಲೆಯ ವಿವಿಧ ದಲಿತ ಸಂಘಟನೆ ಇದರ ವತಿಯಿಂದ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾಭೂಮಿ ದಲಿತರಿಗೆ ನೀಡದೆ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೊಲೆ ಮಾಡಿದ ಉಡುಪಿ ಜಿಲ್ಲಾಡಳಿತದ ದಲಿತ ವಿರೋಧಿ ನಡವಳಿಕೆ ಖಂಡಿಸಿ ಹಾಗೂ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೈಂದೂರು ತಾಲೂಕು ಕಛೇರಿ ಎದುರು ನಡೆದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.ಬುಧವಾರ ಕುಂದಾಪುರ ಸಹಾಯ ಕಮಿಷನರ್ ರಶ್ಮಿ ಬೇಟಿ ನೀಡಿದರು ಹಾಗೂ ವಿವಿಧ ಅಧಿಕಾರಿಗಳು ಬೇಟಿ ನೀಡಿದರು ಕೂಡ ಬೇಡಿಕೆಗಳನ್ನು ಈಡೇರಿಸುವವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.ಗುರುವಾರ ಜಿಲ್ಲಾಧಿಕಾರಿಗಳು ಬರುವ ನಿರೀಕ್ಷೆಯಿದೆ ಎಂದು ಉಪವಾಸ ನಿರತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಮುಖಂಡ ರಾಘವೇಂದ್ರ ಶಿರೂರು,ದಲಿತ ಮುಖಂಡರಾದ ಮಾಧವ ಬಾಕಡ,ರಮೇಶ ಶಿರೂರು,ರಾಮ ಎಮ್.ಮಯ್ಯಾಡಿ,ಮಹಾಲಕ್ಷ್ಮೀ ಬೈಂದೂರು,ಈಶ್ವರ ಶಿರೂರು,ವಾಸುದೇವ ಶಿರೂರು ಮೊದಲಾದವರು ಹಾಜರಿದ್ದರು.