ಬೈಂದೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕೌಶಲ್ಯಾಭಿವೃದ್ದಿ ಮತ್ತು ಜಾಗತಿಕ ಉದ್ಯೋಗವಕಾಶ ನೀಡುವ ಅಜಿನೋರಾ ಶಾಖೆ ಶೈಕ್ಷಣಿಕ ತರಬೇತಿ ಸಂಸ್ಥೆ ನ.23 ರಂದು ಬೈಂದೂರಿನ ಸಿಟಿ ಪಾಯಿಂಟ್ ಕಟ್ಟಡದಲ್ಲಿ ಉದ್ಘಾಟನೆಯಾಗಲಿದೆ.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಶೈಕ್ಷಣಿಕ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಮಾಜಿ ಜಿ.ಪಂ ಸದಸ್ಯ ಎಸ್.ರಾಜು ಪೂಜಾರಿ,ಸುರೇಶ್ ಶೆಟ್ಟಿ,ಉದ್ಯಮಿ ವೆಂಕಟೇಶ ಕಿಣಿ ಹಾಗೂ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶ: ಯುವ ಸಮುದಾಯದ ಸದ್ಬಳಖೆ ಉದ್ದೇಶದಿಂದ ಕೌಶಲ್ಯಾಭಿವೃದ್ದಿಯ ಜೊತೆಗೆ ಸೂಕ್ತ ತರಬೇತಿ ನೀಡಿ ವಿದೇಶದಲ್ಲಿ ಉದ್ಯೋಗವಕಾಶ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರದ ಜೊತೆಗೆ ಉದ್ಯೋಗದ ಭದ್ರತೆ ನೀಡುತ್ತದೆ.ಉಡುಪಿ,ಮಂಗಳೂರು,ಉತ್ತರಕನ್ನಡ ಸೇರಿದಂತೆ ಹೆಚ್ಚುವರಿ ಸೌಲಭ್ಯ ಹೊಂದಿರುವ ರಾಜ್ಯದ ಮೊದಲ ಸಂಸ್ಥೆ ಇದಾಗಿದೆ.ಇತ್ತೀಚೆಗೆ ಬೈಂದೂರಿನಲ್ಲಿ ಬ್ರಹತ್ ಉದ್ಯೋಗ ಮೇಳದ ಮೂಲಕ ಸಂಸದರು ಹಾಗೂ ಶಾಸಕರು ಮತ್ತು ಸಮೃದ್ದ ಬಂದೂರು ಟ್ರಸ್ಟ್ ಮುಂದಾಳತ್ವ ವಹಿಸಿಕೊಂಡಿದೆ.ಆರಂಭದಲ್ಲಿ 600 ವಿದ್ಯಾರ್ಥಿಗಳು ತರಬೇತಿ ಪಡೆಯಲಿದ್ದು ಸುಸಜ್ಜಿತ ತರಗತಿ ಕೋಣೆ,ಅತ್ಯಾಧುನಿಕ ವ್ಯವಸ್ಥೆಯ ತರಬೇತಿ ಕೇಂದ್ರ ಮತ್ತು ವಸತಿ ವ್ಯವಸ್ಥೆ ಹೊಂದಿದೆ.2025-26 ರಲ್ಲಿ ಒಟ್ಟು 1500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆಯಿದೆ.
ಅತ್ಯುತ್ತಮ ತರಬೇತಿ: ವಿದೇಶದಲ್ಲಿ ಉದ್ಯೋಗ ಮಾಡಲು ಭಾಷಾ ಜ್ಞಾನ ಪ್ರಮುಖವಾಗಿದೆ.ಹೀಗಾಗಿ ಜರ್ಮನ್ ಭಾಷಾ,ಜಪಾನ್ ದೇಶದವರಿಂದ ತರಬೇತಿ ನೀಡಿ ಉದ್ಯೋಗ ಕಲ್ಪಿಸಲಾಗುವುದು.ಇದರ ಜೊತೆಗೆ ವಿದೇಶದಲ್ಲಿ ಉದ್ಯೋಗದ ಜೊತೆಗೆ ವಿದ್ಯಾಭ್ಯಾಸ ಮಾಡುವ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳಿವೆ.ಇವುಗಳಿಗೆ ಭಾಷಾ ತರಬೇತಿ ಕೂಡ ಬೈಂದೂರಿನ ಸಂಸ್ಥೆಯಲ್ಲಿ ನೀಡಲಾಗುತ್ತದೆ ಮತ್ತು ನೂರಕ್ಕೆ ನೂರು ಉದ್ಯೋಗದ ಗ್ಯಾರಂಟಿ ಹೊಂದಿದೆ.ಇದರ ಜೊತೆಗೆ ಬೈಂದೂರಿನ ಅಭಿವೃದ್ದಿ ಮತ್ತು ಉತ್ತಮ ಉದ್ಯೋಗವಕಾಶ ಒದಗಿಸಲಾಗುವುದು ಅಜಿನೋರಾ ಸಂಸ್ಥೆಯ ಉದ್ದೇಶವಾಗಿದೆ.ಹಂತ ಹಂತವಾಗಿ ಕೇಂದ್ರ ಸರಕಾರದ ವಿವಿಧ ಯೋಜನೆ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಅತ್ಯುತ್ತಮ ಸೇವೆ ದೊರಕಿಸಿಕೊಡಲಾಗುತ್ತದೆ ಮತ್ತು ಅತ್ಯಧಿಕ ಉದ್ಯೋಗವಕಾಶ ದೊರೆಯಲಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಅಜೀ ಮ್ಯಾಥೋ, ಅಜೀ ಅಗಸ್ಟೆನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.