ತ್ರಾಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಕ್ಕೆ ಸೇರಿ ಸದಸ್ಯರಲ್ಲಿ ಶಿಸ್ತು, ವ್ಯವಹಾರ ಜ್ಞಾನ, ಸಂಘಟನಾ ಶಕ್ತಿ ವೈಯಕ್ತಿಕ ಜೀವನದಲ್ಲಿ ಬದಲಾವಣೆಯಾಗಿ ಕುಟುಂಬಗಳು ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿವೆ.ಬದಲಾಗುತ್ತಿರುವ ಇಂದಿನ ಸಮಾಜದಲ್ಲಿನ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಂತಹ ಧಾರ್ಮಿಕ ಕಾರ್ಯಕ್ರಮದಿಂದ ಹೊಸ ಬದಲಾವಣೆಯಾಗುತ್ತದೆ ಮತ್ತು ಊರಿಗೆ ಶ್ರೇಯಸ್ಸಾಗುತ್ತದೆ.ಎಲ್ಲರೂ ಹೊಂದಾಣಿಕೆಯಿಂದ ಬಾಳುವಂತೆ ಪ್ರೇರೇಪಣೆ ನೀಡಿದಂತಾಗಿರುತ್ತದೆ. ಒಗ್ಗಟ್ಟಿಗೆ, ಯಶಸ್ಸಿಗೆ, ಸಮಾನತೆಗೆ ಈ ಕಾರ್ಯಕ್ರಮ ಸಹಕಾರಿ.ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ ಎಂದು ಹಿರಿಯ ಧಾರ್ಮಿಕ ಮುಖಂಡ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು ಅವರು ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು,ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ತ್ರಾಸಿ ವಲಯ ಇದರ ವತಿಯಿಂದ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ತ್ರಾಸಿ ವಲಯದ ಅಧ್ಯಕ್ಷ ಸದಾನಂದ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಆದ್ಯಾತ್ಮಿಕ ಚಿಂತಕಿ ಶಯದೇವಿಸುತೆ ಮರವಂತೆ ಧಾರ್ಮಿಕ ಪ್ರವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಧ.ಗ್ರಾ.ಯೋಜನೆ ನಿರ್ದೇಶಕ ಮಹೇಶ್ ಎಮ್.ಡಿ,ಶಿವಾನಂದ ಆಚಾರ್ಯ,ಜನಜಾಗೃತಿ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷ ಸುಧಾಕರ ಆಚಾರ್ಯ,ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ ಶಿರೂರು,ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ ಶಿರೂರು,ತ್ರಾಸಿ ವಲಯಾಧ್ಯಕ್ಷೆ ಪ್ರಮೀಳಾ ಗಾಣಿಗ,ಶೌರ್ಯ ವಿಪತ್ತು ಘಟಕದ ಪ್ರವೀಣ ಮೊವಾಡಿ,ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ನಿಕಟಪೂರ್ವಾಧ್ಯಕ್ಷರಾದ ರಘುರಾಮ ಕೆ.ಪೂಜಾರಿ,ಕೃಷ್ಣ ಪೂಜಾರಿ,ನಾರಾಯಣ ಕೆ ,ಶೇಖರ ಗುಜ್ಜಾಡಿ,ಶ್ರೀಧರ ಗಾಣಿಗ,ಕೊಲ್ಲೂರು ವಲಯದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ವಿನಾಯಕ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು ಸ್ವಾಗತಿಸಿದರು.ಕೃಷಿ ಅಧಿಕಾರಿ ರಾಜು ಹಾಗೂ ವಂದನಾ ಕಾರ್ಯಕ್ರಮ ನಿರ್ವಹಿಸಿದರು.ಸೇವಾಪ್ರತಿನಿಧಿ ನಾಗರತ್ನ ವಂದಿಸಿದರು.

News/Giri shiruru

 

Leave a Reply

Your email address will not be published. Required fields are marked *

5 − 3 =