ಶಿರೂರು; ಕ್ರೀಡಾಕೂಟಗಳ ಆಯೋಜನೆ ಕೇವಲ ಕ್ರೀಡೆಗೆ ಮಾತ್ರ ಮೀಸಲಾಗಿರುವುದಿಲ್ಲ ಬದಲಾಗಿ ಸಂಘಟನೆ,ಪರಸ್ಪರ ಬಾಂಧವ್ಯ ಹಾಗೂ ಸ್ನೇಹ ಸಾಮರಸ್ಯವನ್ನು ಬೆಳೆಸುತ್ತದೆ.ಮೇಸ್ತ ಸಮುದಾಯದ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರ ಮೂಲಕ ಉತ್ತಮ ಕಾರ್ಯಕ್ರಮವನ್ನು ವಿಕ್ರಮ ಯುವಕ ಸಂಘ ಆಯೋಜಿಸಿದೆ.ಶಿಸ್ತು ಹಾಗೂ ಒಗ್ಗಟ್ಟು ಶ್ಲಾಘನೀಯವಾಗಿದೆ ಈ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಲಿ ಎಂದು ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಅರ್ಚಕ ಪಾಂಡುರಂಗ ಮೇಸ್ತ ಹೇಳಿದರು.ಅವರು ವಿಕ್ರಮ ಯುವಕ ಸಂಘ ನಿತ್ಯಾನಂದ ನಗರ ಕರಿಕಟ್ಟೆ ಶಿರೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ರಾಜ್ಯಮಟ್ಟದ ಲೈಟ್ ಟೆನ್ನಿಸ್ ಬಾಲ್ 60 ಗಜಗಳ ಮೇಸ್ತ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ ವಿಕ್ರಮ್ ಮೇಸ್ತ ಟ್ರೋಪಿ -2024 ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಉದ್ಯಮಿ ರಾಮ ಎ.ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಯುವ ಉದ್ಯಮಿ ಪುರುಷೋತ್ತಮ್ ಪಿ.ಮೇಸ್ತ ಟ್ರೋಪಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ವಿಕ್ರಮ್ ಯುವಕ ಸಂಘದ ಅಧ್ಯಕ್ಷ ಉಮೆಶ ಪಿ.ಮೇಸ್ತ,ಸ.ಪ.ಪೂ ಕಾಲೇಜಿನ ಉಪಪ್ರಾಂಶುಪಾಲ ಬೊಮ್ಮಯ್ಯ ಗಾಂವ್ಕರ್,ನಿವೃತ್ತ ಸೈನಿಕ ರಮೇಶ್ ಬಿ.ಮೇಸ್ತ,ವಕೀಲ ಲಿಂಗಪ್ಪ ಆರ್.ಮೇಸ್ತ,ವಿಕ್ರಮ್ ಯುವಕ ಸಂಘದ ಮಾಜಿ ಅಧ್ಯಕ್ಷ ರಘುರಾಮ್ ವಿ.ಮೇಸ್ತ,ಹಿರಿಯರಾದ ಗೋವಿಂದ ಮೇಸ್ತ,ಚಂದ್ರಹಾಸ್ ಮೇಸ್ತ ಕೋಟೆಮನೆ,ಪಾಂಡುರಂಗ ವಿ.ಮೇಸ್ತ,ನಾಗೇಶ್ ಪಿ.ಮೇಸ್ತ,ರಮೇಶ ಮೇಸ್ತ,ಶ್ರೀಕಾಂತ ಮೇಸ್ತ,ರತ್ನಾಕರ ಆರ್.ಮೇಸ್ತ,ಆನಂದ ಮೇಸ್ತ ಕೇಸ್ನಿ,ಕೇಶವ ಆರ್.ಮೇಸ್ತ,ನರಸಿಂಹ ಜಿ.ಮೇಸ್ತ,ಪತ್ರಕರ್ತ ಗಿರೀಶ್ ಶಿರೂರು,ವಿನೋದ ಮೇಸ್ತ ಉಪಸ್ಥಿತರಿದ್ದರು.
ದೇವರಾಜ್ ಮೇಸ್ತ ಸ್ವಾಗತಿಸಿದರು.ಶಿಕ್ಷಕ ಗಿರೀಶ್ ಪಿ.ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.ಕುಮಾರ್ ಜಿ.ಮೇಸ್ತ ವಂದಿಸಿದರು.
ವರದಿ/ಗಿರೀಶ್ ಶಿರೂರು
ಚಿತ್ರ: ಪವನ್ ಮೇಸ್ತ ಶಿರೂರು