ಬೈಂದೂರು:ಬೈಂದೂರಿನ ಅನುದೀಪ್ ಹಾಗೂ ಮಿನುಷಾ ದಂಪತಿಗೆ ಈ ವರ್ಷ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ದೇಶದ ಪ್ರಧಾನಮಂತ್ರಿ ಕಛೇರಿಯಿಂದ ಆಹ್ವಾನ ಬಂದಿದ್ದು ಅವರು ಹೊಸದಿಲ್ಲಿಗೆ ತೆರಳಿದ್ದಾರೆ.2020ರ ನವೆಂಬರ್‌ನಲ್ಲಿ ಅವರ ವಿವಾಹವಾಗಿದ್ದು ಎಲ್ಲರಂತೆ ದೂರದ ಪ್ರವಾಸಿ ತಾಣಗಳಿಗೆ ತೆರಳಿ ಮಧುಚಂದ್ರ ಆಚರಿಸುವ ಬದಲು ಬೈಂದೂರಿನ ಪ್ರಸಿದ್ದ ಪ್ರವಾಸಿ ಸ್ಥಳವಾದ ಸೋಮೇಶ್ವರ ಬೀಚ್ ಸ್ವಚ್ಚತೆ ಮೂಲಕ ಗುರುತಿಸಿಕೊಂಡಿದ್ದರು.ಈ ವಿಚಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ಬಂದು ಅವರನ್ನು ತಮ್ಮ ಮನ್ ಕೀ ಬಾತ್‌ನಲ್ಲಿ ಉಲ್ಲೇಖ ಮಾಡಿದ್ದರು.