ಬೈಂದೂರು: ಕಂಬಳಗಳು ಕರಾವಳಿಯ ಸಾಂಸ್ಕ್ರತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.ಅತ್ಯಾಧುನಿಕ ವ್ಯವಸ್ಥೆಯ ಅಳವಡಿಕೆ ಮತ್ತು ಬದಲಾವಣೆಯ ಮೂಲಕ ಕಂಬಳಗಳು ಯುವ ಸಮುದಾಯವನ್ನು ಸೆಳೆಯುತ್ತಿದೆ.ಬೈಂದೂರು ಕಂಬಳ ಗ್ರಾಮೀಣ ಭಾಗದ ರೈತರ ಸಮಾಗಮವಾಗಲಿ ಮತ್ತು ಕೃಷಿಕರ ಸಾಂಸ್ಕ್ರತಿಕ ಹಿರಿಮೆಯನ್ನು ಹೆಚ್ಚಿಸಲಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಬೈಂದೂರು ತಾಲೂಕು ರೈತ ಸಂಘ,ಸಮಸ್ತ ಮರಾಠಿ ಸಮಾಜ,ಗೊಂಡ ಸಮಾಜ,ಸಾಂಪ್ರದಾಯಿಕ ಕಂಬಳ ಸಮಿತಿ ಬೈಂದೂರು ಹಾಗೂ ಊರಿನ ಗ್ರಾಮಸ್ಥರಿಂದ ಜನವರಿ 07 ರಂದು ಬೈಂದೂರಿನ ಗಂಗನಾಡು ಸಮೀಪದ ಕ್ಯಾರ್ತೂರು ಕಂಬಳ ಗದ್ದೆಯಲ್ಲಿ ನಡೆಯುವ ರಾಜ್ಯ ಮಟ್ಟದ ಹೊನಲು ಬೆಳಕಿನ ಕಂಬಳೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಈ ಮಾತುಗಳನ್ನಾಡಿದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಜನವರಿ 07 ರಂದು ಪ್ರಪ್ರಥಮ ಬಾರಿಗೆ ಬೈಂದೂರಿನಲ್ಲಿ ಅದ್ದೂರಿಯ ರಾಜ್ಯಮಟ್ಟದ ಕಂಬಳ ನಡೆಯಲಿದೆ.ಈಗಾಗಲೇ ಕಂಬಳಕ್ಕೆ ಸಿದ್ದತೆ ನಡೆಯುತ್ತಿದ್ದು ರಾಜ್ಯಮಟ್ಟದ ಅನೇಕ ನಾಯಕರು ಆಗಮಿಸಲಿದ್ದಾರೆ.ಮೂರು ಜಿಲ್ಲೆಗಳ ರೈತರ ಸಮಾಗಮದ ಮೂಲಕ ಬೈಂದೂರಿನಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬರಲಿದೆ ಹಾಗೂ ಸಾಧಕ ಕಂಬಳದ ಓಟಗಾರರನ್ನು,ಹಿರಿಯ ರೈತರನ್ನು ಹಾಗೂ ಕಂಬಳದ ಪೋಷಕರನ್ನು ಸಮ್ಮಾನಿಸಲಾಗುವುದು.ಕಂಬಳ ಸ್ಪರ್ಧೆಯು ಹಲಗೆ ವಿಭಾಗ ಪ್ರಥಮ ಒಂದು ಪಾವನ್ ಚಿನ್ನದ ಪದಕ,ದ್ವಿತೀಯ ಆರ್ಧ ಪಾವನ್ ಚಿನ್ನದ ಪದಕ,ಹಗ್ಗ ಹಿರಿಯ ಪ್ರಥಮ ಒಂದು ಪಾವನ್ ಚಿನ್ನದ ಪದಕ,ದ್ವಿತೀಯ ಆರ್ಧ ಪಾವನ್ ಚಿನ್ನದ ಪದಕ,ಹಗ್ಗ ಜೂನಿಯರ್ ಪ್ರಥಮ ಪ್ರಥಮ ಆರ್ಧ ಪವನ್ ಚಿನ್ನದ ಪದಕ,ದ್ವಿತೀಯ ಕಾಲು ಪಾವನ್ ಚಿನ್ನದ ಪದಕ,ಸಬ್ ಜೂನಿಯರ್ ಪ್ರಥಮ ಆರ್ಧ ಪಾವನ್ ಚಿನ್ನದ ಪದಕ ಹಾಗೂ ದ್ವಿತೀಯ ಕಾಲು ಪವನ್ ಚಿನ್ನದ ಪದಕ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಂಬಳದ ಸಂಚಾಲಕ ಗಣಪ ಮರಾಠಿ ಹಾಜರಿದ್ದರು.

 

Leave a Reply

Your email address will not be published.

three − three =