ಬೈಂದೂರು: ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಬೇಟಿ ಮಾಡಿ ಬೈಂದೂರು ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚುರುಕು ನೀಡಲು ಮನವಿ ನೀಡಿದರು.ಸಂಸದರ ಮನವಿಗೆ ಸ್ಪಂಧಿಸಿದ ಸಚಿವರು ಕ್ಷೇತ್ರದ ಬಹುತೇಕ ಯೋಜನೆಗಳನ್ನು ಚುನಾವಣೆಗೆ ಮುನ್ನ ಸಂಬಂಧಪಟ್ಟ ಇಲಾಖೆಯ ಸೂಕ್ತ ಮಾಹಿತಿ ಪಡೆದು ಕಾರ್ಯಪ್ರವೃತ್ತರಾಗಲು ತಿಳಿಸಿದ್ದಾರೆ.ಬೈಂದೂರು ಜಂಕ್ಷನ್ ಪ್ಲೈವರ್,ಯಡ್ತರೆ ಪ್ಲೈವರ್ ಮತ್ತು ಸರ್ವಿಸ್ ರಸ್ತೆ,ತ್ರಾಸಿ,ಮುಳ್ಳಿಕಟ್ಟೆ,ತಲ್ಲೂರು,ಹೆಮ್ಮಾಡಿ ಜಂಕ್ಷನ್ ಪೈವರ್,ಶಿರೂರು-ನೀರ್‍ಗದ್ದೆ ವರೆಗೆ ಸರ್ವಿಸ್ ರಸ್ತೆ,ಬಸ್ಸು ನಿಲ್ದಾಣ,ತ್ರಾಸಿ ಸೇರಿದಂತೆ ಹೆದ್ದಾರಿ ಬೀದಿ ದೀಪ ಅಳವಡಿಕೆ ಸೇರಿದಂತೆ ಹತ್ತಕ್ಕೂ ಅಧಿಕ ಬಾಕಿ ಉಳಿದಿರುವ ಕಾಮಗಾರಿಗಳ ವರದಿ ಪಡೆದು ಶೀಘ್ರ ಆರಂಭಿಸಲು ಹೆದ್ದಾರಿ ಇಲಾಖೆಗೆ ಸಚಿವರು ಸೂಚನೆ ನೀಡಿದ್ದಾರೆ.
ಬೈಂದೂರು ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ಸಂಸದರ ಕಳೆದೆರಡು ವರ್ಷದಿಂದ ನಿರಂತರ ಅಧಿಕಾರಿಗಳ ಸಂಪರ್ಕದಲ್ಲಿದ್ದು ಬೇಡಿಕೆ ಈಡೇರಿಸುವ ಭರವಸೆ ನೀಡಿರುವುದನ್ನು ನೆನಪಿಸಿಕೊಳ್ಳಬಹುವುದಾಗಿದೆ.