ಬೈಂದೂರು: ಬೈಂದೂರು ಭಾಗದ ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ ರವಿವಾರ ನಡೆಯಿತು.ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.

ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಕಂಬಳಗಳು ಕರಾವಳಿಯ ಸಂಪ್ರದಾಯದ ಪ್ರತೀಕವಾಗಿದೆ.ಕೃಷಿಯ ಜೊತೆಗೆ ತಲಾತಲಾಂತರದಿಂದ ಕೆಲವು ಮನೆ ತನಗಳು ನಡೆಸಿಕೊಂಡು ಬಂದಿರುವ ಕಂಬಳ ನಮ್ಮ ಸಾಂಸ್ಕ್ರತಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.ಕಂಬಳಗಳು ಗ್ರಾಮೀಣ ಭಾಗದ ಜನರಿಗೆ ಚೈತನ್ಯ ನೀಡುವ ಉತ್ಸವಗಳಾಗಿವೆ.ತಗ್ಗರ್ಸೆ ಕಂಬಳ ಬೈಂದೂರಿನ ಪ್ರಸಿದ್ದ ಕಂಬಳವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಕಂಬಳಕ್ಕೆ ಸರಕಾರದಿಂದ  ಒಂದು ಕೋಟಿ ಹಣ ಮೀಸಲಿರಿಸಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬು ಶೆಟ್ಟಿ,ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶಚಂದ್ರ ಶೆಟ್ಟಿ,ಠಾಣಾಧಿಕಾರಿ ತಿಮ್ಮೇಶ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಮಂಜುನಾಥ್ ಭಂಡಾರಿ ಇವರಿಗೆ ಕಂಬಳ ಸಮಿತಿ ವತಿಯಿಂದ ಗೌರವಿಸಲಾಯಿತು.ಕಿಶೋರ ಸಸಿಹಿತ್ಲು ಸ್ವಾಗತಿಸಿದರು.ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.ಗೋವಿಂದ ಎಂ.ನಾಯ್ಕನಕಟ್ಟೆ ವಂದಿಸಿದರು.

ತಗ್ಗರ್ಸೆ ಕಂಬಳೋತ್ಸವದ ಫಲಿತಾಂಶ.

ಹಲಗೆ ವಿಭಾಗ ಪ್ರಥಮ:ಚೈತ್ರ ಪರಮೇಶ್ವರ ಭಟ್ ಬೋಳಂಬಳ್ಳಿ

ದ್ವಿತೀಯ:ನೀರಜ್ ಆತ್ಮಜ್ ಬಾರಕೂರು

 

ಹಗ್ಗ ವಿಭಾಗ ಹಿರಿಯ ಪ್ರಥಮ:ದಿಶಾ ಶ್ರೇಯಸ್ ನಾರಾಯಣ ದೇವಾಡಿಗ ಕಂಚಿಕಾನ್

ಹಗ್ಗ ವಿಭಾಗ ದ್ವಿತೀಯ:ಶ್ರೀರಾಮ ಚೈತ್ರ ಪರಮೇಶ್ವರ ಭಟ್ ಬೋಳಂಬಳ್ಳಿ

 

ಹಗ್ಗ ವಿಭಾಗ ಕಿರಿಯ  ಎ ಪ್ರಥಮ:ನೀಲಕಂಠ ಹುದಾರ್

ದ್ವಿತೀಯ: ಗಣಪ ಗಂಗನಾಡು

 

ಹಗ್ಗ ವಿಭಾಗ ಕಿರಿಯ ಬಿ ಪ್ರಥಮ: ಮಂಜು ಮ್ಯೆಯ್ಯಾಡಿ ಮೆಟ್ಟಿನಮನೆ

ದ್ವಿತೀಯ: ಶ್ರೀ ಸ್ಕಂದ ಉಳ್ಳೂರು ಕಂದಾವರ

 

Leave a Reply

Your email address will not be published.

14 + 18 =