ಬೈಂದೂರು: ಬೈಂದೂರು ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಯಡ್ತರೆಮನೆ,ಹೊಳ್ಳರಮನೆ ಮುಂತಾದ ದೊಡ್ಡ ಭೂ ಹಿಡುವಳಿದಾರರ ಭೂಮಿಗಳಲ್ಲಿ ತಲೆತಲಾಂತರದಿಂದ ಕೆಲವು ಕುಟುಂಬಗಳು ವಾಸವಾಗಿದೆ.ಕೆಲವರು ಗೇಣಿ ಅರ್ಜಿ ಕೂಡ ನೀಡಿದ್ದಾರೆ.ಆದರೆ ಕೆಲವು ಪಟ್ಟಾಭದ್ರಾ ಹಿತಾಶಕ್ತಿಗಳು ಇಂತಹ ಜಾಗಗಳನ್ನು ಹುಡುಕಿ ಸಾಂಧರ್ಭಿಕ ದಾಖಲೆ ಸ್ರಷ್ಟಿಸಿ ಪಹಣಿ ಬದಲಾವಣೆಯಾಗಿದೆ.ಆದರೆ ಈ ಬಗ್ಗೆ ಮುಗ್ದ ಜನರಿಗೆ ಮಾಹಿತಿ ಇಲ್ಲವಾಗಿದೆ ಮತ್ತು ಕೆಲವು ಕುಟುಂಬಗಳಿಗೆ ಜಾಗ ಕೊಡುವುದಾಗಿ ನಂಬಿಸಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವ ಮಾಹಿತಿ ಇದೆ.ಹೀಗಾಗಿ ಇಂತಹ ಪ್ರಕರಣ ಕುರಿತು ಪತ್ರ ಬರೆಯುತ್ತೇನೆ ಮತ್ತು ಭೂಕಬಳಿಕೆ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಾಜಕಲ್ಯಾಣ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು.ಅವರು ಬೈಂದೂರಿನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಇಂತಹ ಭೂಮಾಫಿಯ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು ಮತ್ತು ಯಾವುದೇ ರೀತಿಯಲ್ಲಿ ಜನಸಾಮಾನ್ಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು,ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜಡ್ಡು,ಪ್ರಿಯದರ್ಶಿನಿ ದೇವಾಡಿಗ ಹಾಜರಿದ್ದರು.

 

 

Leave a Reply

Your email address will not be published.

three × 1 =