ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ (ರಿ.)ಕರಾವಳಿ ಶಿರೂರು ಇದರ 24ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆ.31 ರಿಂದ ಸೆ.1ರ ವರೆಗೆ ನಡೆಯಲಿದೆ.
ಆ.1 ರಂದು ಬೆಳಿಗ್ಗೆ ಗಣೇಶ ವಿಗ್ರಹ ಪ್ರತಿಷ್ಠಾಪನೆ,ಮದ್ಯಾಹ್ನ ಪೂಜೆ,ಮಹಾಪೂಜೆ,ಮಹಾ ಮಂಗಳಾರತಿ,ಮದ್ಯಾಹ್ನ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.ಸಂಜೆ 6 ರಿಂದ 8ರ ವರೆಗೆ ಭಜನಾ ಕಾರ್ಯಕ್ರಮ,ರಾತ್ರಿ ಪೂಜೆ,ರಂಗಪೂಜೆ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಕರಣಗಳನ್ನು ಬೇಧಿಸಿದ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಠಾಣಾಧಿಕಾರಿ ಪವನ್ ನಾಯಕ್ ರವರನ್ನು ಸಮ್ಮಾನಿಸಲಾಗುವುದು.ಸಭಾ ಕಾರ್ಯಕ್ರಮದ ಬಳಿಕ ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಬಡಗುತಿಟ್ಟಿನ ಪ್ರಸಿದ್ದ ಕಲಾವಿದ ವಿದ್ಯಾಧರ ಜಲವಳ್ಳಿ ಸಂಗಮದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸೆ.1 ರಂದು ಬೆಳಿಗ್ಗೆ ಗಣಹೋಮ,ಸರ್ವಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಂಜೆ ಫಲಾವಳಿಗಳ ಏಲಂ ಬಳಿಕ ಅರಬ್ಬಿ ಸಮುದ್ರದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.