ಶಿರೂರು ; ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಸೆ.29 ರಿಂದ ಅ.1 ರವರೆಗೆ ಜೇಸಿ ಹಬ್ಬ -2023 ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ.
ಸೆ.29 ರಂದು ಸಂಜೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಹಾಗೂ ಮುಂತಾದ ಗಣ್ಯರು ಆಗಮಿಸಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ.
ಸೆ.30 ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಬೈಂದೂರು ಸುರಭಿ ಸಂಸ್ಥೆಯ ಕಲಾವಿದರಿಂದ ಮಕ್ಕಳ ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದೆ.
ಅ.1 ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ಮುಂತಾದ ಗಣ್ಯರು ಆಗಮಿಸಲಿದ್ದಾರೆ ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಮೂರು ಮುತ್ತು ಕುಂದಾಪುರ ಕಲಾವಿದರಿಂದ ಹೇ ದೇವ್ರೇ ಗಿರಾಕಿಯೇ ಇಲ್ಲಾ ಮರಾಯ ನಗೆ ನಾಟಕ ಪ್ರದರ್ಶನಗೊಳ್ಳಲಿದೆ.ಜೇಸಿ ಸಪ್ತಾಹದ ಅಂಗವಾಗಿ ಪ್ರತಿದಿನ ಸಾಧನಾಶ್ರೀ ಪ್ರಶಸ್ತಿ,ಕಮಲಪತ್ರ ಪ್ರಶಸ್ತಿ,ಸಾಧಕರಿಗೆ ಸಮ್ಮಾನ,ಯುವಜೇಸಿ ಪ್ರಶಸ್ತಿ,ಪ್ರತಿದಿನ ಲಕ್ಕಿ ಜೇಸಿ,ಕೊನೆಯ ದಿನ ಲಕ್ಕಿ ಜೇಸಿಗೆ ಚಿನ್ನದ ನಾಣ್ಯ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ಶಿರೂರು ಜೆಸಿಐ ಅಧ್ಯಕ್ಷ ನಾಗೇಂದ್ರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.