ಬೈಂದೂರು: ಜಿಲ್ಲಾಡಳಿತದ ಕಠಿಣ ನಿಯಮಗಳಿಂದ ಲಾರಿ.ಟೆಂಪೋ,ಚಾಲಕ ಮಾಲಕರ ವ್ಯವಹಾರ ಸ್ಥಗಿತಗೊಂಡಿದೆ.ಜಿಲ್ಲೆಯಲ್ಲಿ ಮರಳು,ಕೆಂಪು ಕಲ್ಲು,ಜಲ್ಲಿ ಸೇರಿದಂತೆ ಕಟ್ಟಡ ಸಾಮಾಗ್ರಿ ಸಾಗಿಸುವ ಐದು ಸಾವಿರಕ್ಕೂ ಅಧಿಕ ವಾಹನಗಳಿವೆ.ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ವಿವಿಧ ಕಾರಣ ಮುಂದೊಡ್ಡಿ ದಂಡ ವಿಧಿಸುತ್ತಿದ್ದಾರೆ.ಕರಾವಳಿ ಜಿಲ್ಲೆಯ ವಾಸ್ತವಾಂಶಗಳು ಬೇರೆ ಇದೆ.ಸರಕಾರದ ನಿಯಮ ಪಾಲಿಸಲು ತಾಂತ್ರಿಕ ಸಮಸ್ಯೆಗಳಿವೆ.ತಿಂಗಳುಗಟ್ಟಲೆ ಪರವಾನೆಗೆಗಾಗಿ ಅಲೆಯಬೇಕಿದೆ.ಇದರಿಂದ ಕಾರ್ಮಿಕರು,ಕೂಲಿಯವರು ಹಾಗೂ ಚಾಲಕರು ಸೇರಿದಂತೆ ಇದನ್ನು ನಂಬಿಕೊಂಡವರ ಬದುಕು ಬೀದಿಗೆ ಬರುವಂತಾಗಿದೆ.ಹೀಗಾಗಿ ಜಿಲ್ಲಾಡಳಿತ ಹಾಗೂ ಸರಕಾರ ಪರಿಸ್ಥಿತಿ ಅವಲೋಕಿಸಿ ಲಾರಿ,ಟೆಂಪೋ ಚಾಲಕರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಬೈಂದೂರು ಜೆ.ಎನ್.ಆರ್ ಕಲಾಮಂದಿರದ ಎದುರುಗಡೆ ಲಾರಿ ನಿಲ್ಲಿಸಿ ಲಾರಿ ಚಾಲಕ ಮಾಲಕರು ಪ್ರತಿಭಟನೆ ನಡೆಸಿದ್ದಾರೆ.