ಬೈಂದೂರಿನ JNR ಕಲಾಮಂದಿರದಲ್ಲಿ ನಡೆದ ಮೂರು ಜಿಲ್ಲೆಗಳನ್ನು ಒಳಗೊಂಡ ಜೆಸಿ ವಲಯ 15ರ ಪ್ರತಿಷ್ಠಿತ ಲೇಡಿ ಜೆಸಿ ಮತ್ತು ಜೂನಿಯರ್ ಜೆಸಿ ಸಮ್ಮೇಳನ ಚುಕ್ಕಿ ಇದರಲ್ಲಿ ಜೆಸಿ ರೇಖಾ ಪೂಜಾರಿ ನೇತೃತ್ವದ ಉಪ್ಪುoದ ಲೇಡಿ ಜೆಸಿ ವಿಭಾಗಕ್ಕೆ ವಲಯದ ಟಾಪ್ 1 ಘಟಕ ಪ್ರಶಸ್ತಿ , ನಿಶಾ ಶೆಟ್ಟಿ ನೇತತ್ವದ ಜೂನಿಯರ್ ಜೆಸಿ ವಿಭಾಗಕ್ಕೆ ವಲಯದ ಟಾಪ್ 2 ಘಟಕ ಪ್ರಶಸ್ತಿ , ಲೇಡಿ ಜೆಸಿ ವಿಭಾಗದ ಗುಂಪು ಗಾಯನಕ್ಕೆ ಪ್ರಥಮ , ಲೇಡಿ ಜೆಸಿ ರಂಗೋಲಿ ಸ್ಪರ್ಧೆಯಲ್ಲಿ ವೈಷ್ಣವಿ ಪ್ರಥಮ , ಜೂನಿಯರ್ ಜೆ ಸಿ ವಿಭಾಗದ ಆಶುಭಾಷಣದಲ್ಲಿ ನಿಶಾ ಸಂತೋಷ ಶೆಟ್ಟಿ ಪ್ರಥಮ , ಆಶುಅಭಿನಯ ಸ್ಪರ್ಧೆಯಲ್ಲಿ ದ್ವಿತೀಯ , ಅತ್ಯುತ್ತಮ ಜೂನಿಯರ್ ಜೆಸಿ ಸಪ್ತಾಹಕ್ಕೆ , ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜನೆಗೆ , ಹಾಗೂ ಲೇಡೀಸ್ ಟ್ರೈಯೋ ಡೇಸ್ ಕಾರ್ಯಕ್ರಮದ ಆಯೋಜನೆಗೆ ಸಮಗ್ರ ಪ್ರಶಸ್ತಿಗಳು ದೊರೆತವು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ಜೆಸಿ ಪುರುಷೋತ್ತಮ್ ಶೆಟ್ಟಿ ,ನಿಕಟಪೂರ್ವ ವಲಯಾಧ್ಯಕ್ಷರಾದ ಜೆಸಿ ರಾಯನ್ ಉದಯ್ ಕ್ರಾಸ್ತ, ವಲಯ ನಿರ್ದೇಶಕರುಗಳಾದ ಜೆಸಿ ಸುಮಾನಾ ಪೊಳಲಿ, ಜೆಸಿ ಸ್ವಾತಿ ರೈ ,ಜೆಸಿ ಅಕ್ಷತಾ ಗಿರೀಶ್ , ಜೆಸಿ ನಾಗರಾಜ್ ಪೂಜಾರಿ ,ಘಟಕ ಅಧ್ಯಕ್ಷರಾದ ಜೆಸಿ ಪ್ರದೀಪ್ ಕುಮಾರ್ ಶೆಟ್ಟಿ, ಪೂರ್ವಾಧ್ಯಕ್ಷರುಗಳಾದ ಜೆಸಿ ಉದಯ್ ಡಿ ಆರ್, ಜೆಸಿ ಮಂಗೇಶ್ ಶಾನ್ಭಾಗ್, ಜೆಸಿ ಸುಬ್ರಹ್ಮಣ್ಯ ಜಿ ಉಪ್ಪುಂದ , ಲೇಡಿ ಜೆಸಿ ಅಧ್ಯಕ್ಷರಾದ ಜೆಸಿ ರೇಖಾ ಪೂಜಾರಿ ,ಕಾರ್ಯದರ್ಶಿ ಪುರಂದರ ಉಪ್ಪುಂದ ಜೆಸಿ ಗುರುರಾಜ್ ಹೆಬ್ಬಾರ್ ಜೆಸಿ ನರಸಿಂಹ ದೇವಾಡಿಗ, ಜೆಸಿ ಅನುಷ್, ಜೇಸಿ ಸಂತೋಷ , ಜೆಸಿ ಗೌರಿ ಮಂಗೇಶ್, ಜೆಸಿ ಸೌಮ್ಯ , ಜೆಸಿ ಸುಪರ್ಣ ,ರಮಣಿ ,ಚೈತ್ರ, ಸುಮನ, ಶಿಲ್ಪಾ, ಜೂನಿಯರ್ಸ್ ಜೆಸಿ ಅಧ್ಯಕ್ಷರಾದ ನಿಶಾ ಸಂತೋಷ್. ಶೆಟ್ಟಿ, ವೈಷ್ಣವಿ , ಭೂಮಿಕಾ ಯು, ಅರ್ಪಿತಾ ಭೂಮಿಕಾ, ಸಂಜನಾ, ಸುಮಿತ್, ಅಮಿತ್ ಮತ್ತಿತರರು ಉಪಸ್ಥಿತರಿದ್ದರು..