ಬೈಂದೂರು: ಶ್ರೀನಿಧಿ ಫೌಂಡೇಶನ್(ರಿ.)ಕರ್ನಾಟಕ,ನಮ್ಮವರಿಗಾಗಿ ನಮ್ಮ ದ್ವನಿ ಸಮಾಜಮುಖಿ ಸೇವಾ ಸಂಘ ಕರ್ನಾಟಕ ಇವರ ಸಹಯೋಗದಲ್ಲಿ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಉದ್ಯಮಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಜಯಾನಂದ ಹೋಬಳಿದಾರ್ ರವರಿಗೆ ಧಾರ್ಮಿಕ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ರಾಷ್ಟ್ರೀಯ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ದೊರೆತಿದೆ.ಆ.13 ರಂದು ರವೀಂದ್ರ ಕಲಾ ಭವನ ಬೈನಾ ವಾಸ್ಕೋ ಗೋವಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.